ಮಾಲಿನ್ಯ ಹರಡುವ ಕಾರ್ಖಾನೆ ಬಂದ್

ಮಾಲಿನ್ಯ ಹರಡುವ ಕಾರ್ಖಾನೆ ಬಂದ್

ಕಲಬುರಗಿ : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಖರೀದಿಸುವ ತೊಗರಿಬೇಳೆ ಮತ್ತು ಅಕ್ಕಿ ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಟೆಂಡರ್‌ದಾರರ ವಾರ್ಷಿಕ ದಾಲ್‌ಮಿಲ್‌ನಂಥ ಸಣ್ಣ ಉದ್ಯಮಿಗಳಿಗೆ ಗರಿಷ್ಠ ಮಿತಿಯನ್ನು₹5 ಕೋಟಿಗೆ ಇಳಿಸಬೇಕು’ ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಆಗ್ರಹಿಸಿದರು.

ನಿಗಮವು ಮಧ್ಯಾಹ್ನದ ಬಿಸಿಯೂಟಕ್ಕಾಗಿ ಬೇಳೆ-ಕಾಳು ಟೆಂಡರ್ ಮೂಲಕ ಖರೀದಿಸುತ್ತದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಉತ್ಪಾದಕರ ವಾರ್ಷಿಕ ವಹಿವಾಟು 2 ಕೋಟಿ ಇರಬೇಕು ಎಂಬ ನಿಯಮ ಈ ಹಿಂದೆ ಇತ್ತು. ಆ. 7ರಂದು ಹೊರಡಿಸಿದ ಆದೇಶದಲ್ಲೂ 2 ಕೋಟಿ ಮಿತಿ ಎಂದು ಹೇಳಲಾಗಿದೆ. ಮರುದಿನವೇ ಅಂದರೆ ಆ. 8ರಂದು ಏಕಾಏಕಿ 25 ಕೋಟಿಗೆ ಏರಿಸಲಾಗಿದೆ. ಇದು ಖಂಡನಾರ್ಹ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸ್ಟ್ಯಾಂಪ್ ಡ್ಯುಟಿ ಕಡಿತ ಮಾಡಿ : ‘ಹತ್ತು ವರ್ಷದ ಹಿಂದೆ ಕೆಐಡಿಬಿ’ಯಿಂದ ಜಮೀನು ಖರೀದಿಸಿ ಅಭಿವೃದ್ಧಿ ಮಾಡಿ ಸಣ್ಣ ಕೈಗಾರಿಕೆಗಳಿಗೆ ನೀಡಲಾಗಿದೆ. ಆಗ ಲೀಸ್ ಕಂ ಸೇಲ್ ಆಧಾರದ ಮೇಲೆ ಹತ್ತು ವರ್ಷಗಳ ಅವಧಿಗೆ ನೀಡಿದ್ದರು. ಅಲ್ಲಿ ದಾಲ್‌ಮಿಲ್‌ಗಳನ್ನು ತೆರೆದಿದ್ದಾರೆ.

ಈಗ ಅವಧಿ ಮುಗಿದಿದೆ. ಕಾರಣ, ಬ್ಯಾಂಕ್‌ನವರು ಸಾಲ ನವೀಕರಣಕ್ಕೆ ಈ ಜಮೀನಿಗೆ ಸೇಲ್ ಡೀಡ್ (ಮಾರಾಟ ಪತ್ರ) ಕೇಳುತ್ತಿದ್ದಾರೆ. ಸದ್ಯ ಇದರ ದರವು ಹಿಂದಿಗಿಂತ 400 ಪಟ್ಟು ಹೆಚ್ಚಾಗಿದೆ. ಇದು ಸಣ್ಣ ಕೈಗಾರಿಕೋದ್ಯಮಿಗಳ ಕೈಗೆ ನಿಲುಕುವುದಿಲ್ಲ’ ಎಂದು ಅಮರನಾಥ ಪಾಟೀಲ ತಿಳಿಸಿದರು.

ಈ ಬಗ್ಗೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಅವರಿಗೆ ಮನವಿ ಮಾಡಿದ್ದೇವೆ. ಹಳೆಯ ದರವನ್ನೇ ಪರಿಗಣಿಸುವಂತೆ ಮನವಿ ಮಾಡಿದ್ದೇವೆ. ಇದು ಪೆಂಡಿಂಗ್ ಇದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದೂ ಆಗ್ರಹಿಸಿದರು.

 

Related