ಐಪಿಎಲ್ ಬೆಟ್ಟಿಂಗ್ ಮೇಲೆ ಪೊಲೀಸರ ಹದ್ದಿನ ಕಣ್ಣು

ಐಪಿಎಲ್ ಬೆಟ್ಟಿಂಗ್ ಮೇಲೆ ಪೊಲೀಸರ ಹದ್ದಿನ ಕಣ್ಣು

ಬೆಂಗಳೂರು: ಇಂದಿನಿಂದ ಐಪಿಎಲ್ ಪಂದ್ಯಾವಳಿ ಪ್ರಾರಂಭವಾಗಿದ್ದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿಗಳಿಗೆ ಬೆಟ್ಟಿಂಗ್ ನಡೆಯುವುದರಿಂದ ಪೊಲೀಸ್ ಅಧಿಕಾರಿಗಳು ಬೆಟ್ಟಿಂಗ್ ಆಡುವವರ ಮೇಲೆ ಹದ್ದಿನ ಕಣ್ಣನ್ನು ಇರಿಸಿದ್ದಾರೆ.

ಈ ಬಾರಿ ಐಪಿಎಲ್ ಪಂದ್ಯಾವಳಿ ಅದರಲ್ಲೂ ಬೆಂಗಳೂರಿನಲ್ಲಿ ರೋಚಕವಾಗಿ ನಡೆಯುವ ಭರವಸೆ ಇರುವುದರಿಂದ ಈ ಬಾರಿ ಹೆಚ್ಚಾಗಿ ಬೆಟ್ಟಿಂಗ್ ಪಂದ್ಯಾವಳಿಗಳು ನಡೆಯುತ್ತವೆ ಎಂಬ ಮಾಹಿತಿ ಮೇರೆಗೆ ಬೆಂಗಳೂರಿನ ಕಮಿಷನರ್ ದಯಾನಂದ್  ಅವರು ಎಲ್ಲಾ ಡಿಸಿಪಿಗಳಿಗೆ ಅಲರ್ಟ್ ಆಗಿ ಇರಲು ಸೂಚನೆ ನೀಡಿದ್ದಾರೆ.

 ಆಯಾ ಠಾಣಾ ವ್ಯಾಪ್ತಿಯಲ್ಲಿನ ಬುಕ್ಕಿಗಳ ಮೇಲೆ ನಿಗಾ ಇಡಿ. ಈ ಹಿಂದೆ ಬೆಟ್ಟಿಂಗ್ ಕೇಸ್ ಅಲ್ಲಿ ಅರೆಸ್ಟ್ ಆಗಿ ಜಾಮೀನಿನ ಮೇಲೆ ಬಂದಿರುವವರ ಮೇಲೂ ತೀವ್ರ ನಿಗಾ ಇಡಿ. ಬೆಟ್ಟಿಂಗ್ ಆಡೋಕೆ ಅಂತಾನೆ ಹೋಟೆಲ್, ಲಾಡ್ಜ್ ಗಳಲ್ಲಿ ರೂಂ ಪಡೀತಾರೆ. ಹೀಗಾಗಿ ಹೋಟೆಲ್, ಲಾಡ್ಜ್ ಗಳ ಪರಿಶೀಲನೆ ಮಾಡಬೇಕು. ಎಲ್ಲಾ ಆಯಾಮದಲ್ಲೂ ಮಾಹಿತಿ ಪಡೆಯೋದ್ರ ಜೊತೆಗೆ ಅಲರ್ಟ್ ಆಗಿ ಇರಲು ಸೂಚನೆ ನೀಡಲಾಗಿದೆ.

Related