ವಿಷವಾದ ಕೃಷ್ಣಾ ನದಿ ನೀರು!

  • In State
  • June 26, 2023
  • 231 Views
ವಿಷವಾದ ಕೃಷ್ಣಾ ನದಿ ನೀರು!

ರಾಯಚೂರು: ರಾಜ್ಯದಲ್ಲಿ ಇತಿಹಾಸವುಳ್ಳ ನದಿಯಂದೆ ಪ್ರಸಿದ್ಧಿಯನ್ನು ಹೊಂದಿರುವ ಕೃಷ್ಣಾ ನದಿಗೆ ಇತ್ತೀಚಿನ ದಿನಗಳಲ್ಲಿ ರಾಯಚೂರು ತಾಲೂಕಿನಲ್ಲಿ 30 ಅಥವಾ 40ಕ್ಕಿನ ಹೆಚ್ಚು ಕಾರ್ಖಾನೆಗಳಿದ್ದು ಆ ಕಾರ್ಖಾನೆಗಳು ವಿಷಕಾರಿ ನೀರನ್ನು ನದಿಗೆ ಬಿಡುವುದರಿಂದ ಸುತ್ತಮುತ್ತಲಿನ ಗ್ರಾಮ, ನಗರ ಪ್ರದೇಶಗಳಲ್ಲಿ ಇರುವಂತಹ ಜನರಿಗೆ ಆರೋಗ್ಯದ ಸಮಸ್ಯೆ ಎದುರಾಗಿದೆ.

ಹೌದು, ತಾಲೂಕಿನ ಶಕ್ತಿನಗರ ಬಳಿಯ ಕೃಷ್ಣಾ ನದಿ ಸಮೀಪವಿರುವ 30-40 ಕೆಮಿಕಲ್‌ ಕಾರ್ಖಾನೆಗಳು ವೇಸ್ಟೇಜ್‌ ನೀರನ್ನು ನದಿಗೆ ಬಿಡುತ್ತಿರುವುದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಕೃಷ್ಣಾ ನದಿಯ ನೀರು ಶಕ್ತಿನಗರದಿಂದ ಕುರ್ವಾಕುಲ, ನಾರದಗಡ್ಡೆ ಮೂಲಕ ತೆಲಂಗಾಣದ ಝೂರಾಲ್‌ ಡ್ಯಾಂ ಸೇರಲಿದೆ. ನದಿಯ ಸರಹದ್ದಿನ ಗ್ರಾಮಗಳ ಜನರು ಕುಡಿಯಲು ಇದೇ ನೀರನ್ನು ಬಳಸುತ್ತಿದ್ದಾರೆ. ಹೀಗಾಗಿ ಜನರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.

ಶಕ್ತಿನಗರ ಬಳಿಯಿರುವ ಕೆಮಿಕಲ್‌ ಕಾರ್ಖಾನೆಗಳು ಬಿಡುವ ವೇಸ್ಟೇಜ್‌ ನೀರು ಕೃಷ್ಣಾ ನದಿ ಸೇರುತ್ತಿದ್ದು, ಇಲ್ಲಿಂದಲೇ ರಾಯಚೂರು ನಗರ ಪೂರ್ಣ ಮತ್ತು ರಾಯಚೂರು ಗ್ರಾಮೀಣ ಭಾಗದ ಕೆಲ ಗ್ರಾಮಗಳಿಗೆ ಕುಡಿವ ನೀರು ಪೂರೈಸಲಾಗುತ್ತದೆ. ನದಿ ನೀರಿನಲ್ಲಿ ಕಾರ್ಖಾನೆಗಳ ಕೆಮಿಕಲ್‌ ಸೇರುವುದರಿಂದ ಜೀವಜಲವೇ ಜನರಿಗೆ ವಿಷವಾಗಿ ಪರಿಣಮಿಸಿದೆ.

 

Related