ಸರಳ ಸುರಕ್ಷಿತ ನಾಗರಿಕ ಸ್ನೇಹ ಯೋಜನೆ ಮೂಲಕ ಜನರೇ ತಮ್ಮ ಜಮೀನಿಗೆ ಪೋಡಿ ತಯಾರಿಸಿಕೊಳ್ಳಬಹುದು.ಮಧ್ಯವರ್ತಿಗಳ ಹಾವಳಿಗೆ ತಡೆ

  • In State
  • April 30, 2022
  • 255 Views
ಸರಳ ಸುರಕ್ಷಿತ ನಾಗರಿಕ ಸ್ನೇಹ ಯೋಜನೆ ಮೂಲಕ ಜನರೇ ತಮ್ಮ ಜಮೀನಿಗೆ ಪೋಡಿ ತಯಾರಿಸಿಕೊಳ್ಳಬಹುದು.ಮಧ್ಯವರ್ತಿಗಳ ಹಾವಳಿಗೆ ತಡೆ

ಜಮೀನಿನ ಪೋಡಿ ಮಾಡಲು ಹಾಗೂ ಭೂ ಪರಿರ್ತನೆ, ವಿಭಜನೆ ನಕ್ಷೆ ಅನ್ನು ಇನ್ಮುಂದೆ ಜನರೇ ಖುದ್ದು ಮಾಡಬಹುದಾಗಿದೆ. ಅದಕ್ಕಾಗಿ ಕಂದಾಯ ಇಲಾಖೆ ಸ್ವಾವಲಂಭಿ ಎಂಬ ವಿಶೇಷ ಆ್ಯಪ್ ಜಾರಿಗೆ ತಂದಿದೆ. ದೇಶದಲ್ಲೆ ಮೊದಲ ಬಾರಿಗೆ ವಿನೂತನ ಆ್ಯಪ್ ನಮ್ಮ ಇಲಾಖೆ ಮಾಡಿದೆ. ಇದೊಂದು ಸ್ವಯಂ ಸ್ವಾವಲಂಭಿ ಯೋಜನೆ ಆಗಿದ್ದು, ಕಂದಾಯ ಇಲಾಖೆಯ ಎಲ್ಲಾ ಕೆಲಸಗಳನ್ನು ಸರಳೀಕರಣ ಮಾಡುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ಸ್ವಾವಲಂಬಿ ನಿಮ್ಮ ಪೋಡಿ ನೀವೆ ಮಾಡಿ ಯೋಜನೆ ಆರಂಭ ಕುರಿತು ಮಾತನಾಡಿದ ಅವರು, ಪ್ರತಿವರ್ಷ  10 ಲಕ್ಷ ಮಂದಿ ಪೋಡಿಗೆ ಅರ್ಜಿ ಹಾಕುತ್ತಾರೆ. ಆದರೆ ಕ್ಲಿಯರ್ ಆಗುವುದು ಕೇವಲ 4 ಲಕ್ಷದಷ್ಟು ಮಾತ್ರ. ಹೀಗಾಗಿ ಜನರಿಗೆ ಇದರ ಬಗ್ಗೆ ಬೇಸರವಿದೆ. ನಮ್ಮ ಜಮೀನನ್ನ ಪೋಡಿ ಮಾಡಲು, ಅಣ್ಣತಮ್ಮಂದಿರು ಭಾಗ ಮಾಡಿಕೊಳ್ಳಲು ಕಷ್ಟವಾಗ್ತಿದೆ. ಹೀಗಾಗಿ ಇದಕ್ಕೆ ಪರಿಹಾರವಾಗಿ ಒಂದು ವ್ಯವಸ್ಥೆಯನ್ನ ಮಾಡಿದ್ದೀವಿ. ಅಧಿಕಾರಿಗಳಿಗೆ ನಿರಂತರ ಟ್ರೈನಿಂಗ್  ಮಾಡಿ ಒಂದು ಆ್ಯಪ್ ನಲ್ಲಿ ಅಪ್ ಲೋಡ್ ಮಾಡಬಹುದು. ಅದಕ್ಕೆ ಕಾನೂನಾತ್ಮಕ ಅನುಮೋದನೆ ನಾವೂ ಕೋಡುತ್ತೇವೆ. ಭೂ ಪರಿವರ್ತನಾ ಪೂರ್ವ ನಕ್ಷೆ, 11 ಇ ಪೋಡಿ ವಿಭಜನೆ ನಕ್ಷೆ, ಹೀಗೆ ಹಲವು ಕೆಲಸಗಳನ್ನ ರೈತರೇ ಮಾಡಿಕೊಳ್ಳಬಹುದು ಎಂದು ಆ್ಯಪ್ ಕುರಿತು ತಿಳಿಸಿದರು.

ಈ ಆ್ಯಪ್ ಮುಖಾಂತರ ಜನರೇ ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್ ಬಳಸಿ ನಿಮ್ಮ  ದಾಖಲೆಗಳನ್ನು ಪಡೆಯಬಹುದು. ಸ್ವಾವಲಂಭಿ ಅಂದರೆ 11 ಇ ಸ್ಕೆಚ್ ಹಾಗೂ ಪೋಡಿ ವಿಧಾನವನ್ನು ಮಾಡುವುದು.ಈ ಹಿಂದೆ ಸರ್ವೆಯರ್ ಬಂದು ಅಪ್ರೂವಲ್ ಮಾಡಲು ತುಂಬಾ ತಡವಾಗುತ್ತಿತ್ತು.ಆದರೆ, ಈಗ ಅವರೇ ಭೂ ಪರಿವರ್ತನೆ ಮಾಡಿಕೊಳ್ಳಬಹುದು. ಸ್ವಾವಲಂಬಿ, ಸರಳ ಸುರಕ್ಷಿತ ನಾಗರಿಕ ಸ್ನೇಹ ಯೋಜನೆ. ಇದರಿಂದ ಮಧ್ಯವರ್ತಿಗಳ ಹಾವಳಿಗೆ ತಡೆ ಬೀಳುತ್ತದೆ.

Related