ಮಾಣಿಕ್ಯಗಿರಿಯಲ್ಲೊಂದು ಪವಾಡ

  • In State
  • March 11, 2020
  • 432 Views
ಮಾಣಿಕ್ಯಗಿರಿಯಲ್ಲೊಂದು ಪವಾಡ

ಕಲಬುರಗಿ, ಮಾ.11 : ಮಹಾಯೋಗಿನಿ ಮಾತೆ ಮಾಣಿಕೇಶ್ವರಿ ಅಮ್ಮನವರ ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯುವಾಗ ಹಾವು ಪ್ರತ್ಯಕ್ಷವಾದ ಘಟನೆ ನಡೆದಿದೆ. ಕಲಬುರ್ಗಿ ಜಿಲ್ಲೆ ಮಾಣಿಕ್ಯಗಿರಿ ಗುಹೆಯಲ್ಲಿ ಲಿಂಗೈಕ್ಯರಾದ ಮಾತೆ ಮಾಣಿಕೇಶ್ವರಿ ಅಮ್ಮನವರ ಅಂತ್ಯಕ್ರಿಯೆ ನಡೆಯುವ ಸಂದರ್ಭದಲ್ಲಿ ಹಾವು ಕಾಣಿಸಿಕೊಂಡಿದೆ.
ಅಂತ್ಯಕ್ರಿಯೆ ವಿಧಾನ ಪೂರ್ಣಗೊಳ್ಳುವವರೆಗೆ ಹಾವು ಹೆಡೆ ಬಿಚ್ಚಿಕೊಂಡು ನೋಡಿದೆ. ಮಾತೆ ಮಾಣಿಕೇಶ್ವರಿ ಅಮ್ಮನವರೇ ಹಾವಿನ ರೂಪದಲ್ಲಿ ಕಾಣಿಸಿಕೊಂಡು ದರ್ಶನ ನೀಡಿದ್ದಾರೆ ಎಂದು ಭಕ್ತರೆಲ್ಲ ಮಾತನಾಡಿಕೊಂಡಿದ್ದಾರೆ ಎನ್ನಲಾಗಿದೆ.

Related