ಮತ್ತೊಮ್ಮೆ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದ ತೆಂಡೂಲ್ಕರ್!

ಮತ್ತೊಮ್ಮೆ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದ ತೆಂಡೂಲ್ಕರ್!

ಬೆಂಗಳೂರು: ಕ್ರಿಕೆಟ್ ನ ದೇವರೆ ಎಂದೇ ಖ್ಯಾತಿಯನ್ನು ಹೊಂದಿರುವ ಸಚಿನ್ ತೆಂಡೂಲ್ಕರ್ ಅವರು ಬೆಂಗಳೂರಿನಲ್ಲಿ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಸಾಯಿಕೃಷ್ಣನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಒನ್​ ವರ್ಲ್ಡ್ ಒನ್ ಫ್ಯಾಮಿಲಿ ಕಪ್​ ವಿಶೇಷ ಕ್ರಿಕೆಟ್ ಪಂದ್ಯಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಆಗಮಿಸಿದ್ದಾರೆ. ಈ ವೇಳೆ ಕನ್ನಡದಲ್ಲೇ ಮಾತು ಆರಂಭಿಸುವ ಮೂಲಕ ಭಾರತ ರತ್ನ ಸಚಿನ್ ತೆಂಡೂಲ್ಕರ್ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು, ಸಚಿನ್, ಎಲ್ಲರಿಗೂ ನಮಸ್ಕಾರ ಎಂದು ಹೇಳುವ ಮೂಲಕ ಕರ್ನಾಟಕದ ಜನತೆ ಎದುರು ಕನ್ನಡದಲ್ಲಿಯೇ ಮಾತನಾಡಿದರು. ಈ ವೇಳೆ ಈ ಪಂದ್ಯದ ಬಗ್ಗೆ ಹಾಗೂ ಅದರ ಹಿಂದಿನ ಉದ್ದೇಶದ ಬಗ್ಗೆ ಮಾತನಾಡಿದ ತೆಂಡೂಲ್ಕರ್, ಇಲ್ಲಿ ಯುವಕರು, ಮಕ್ಕಳು ಎಲ್ಲರೂ ನೆರೆದಿದ್ದೀರಿ. ನೀವುಗಳು ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಭಾರತ ದೇಶದಲ್ಲಿ ಎಲ್ಲರೂ ಸಹ ಇನ್ನಷ್ಟು ಫಿಟ್​ ಆಗಿ ಇರಬೇಕು ಎಂದು ಸಲಹೆ ನೀಡಿದರು. ಕೇವಲ ಆಟಗಾರರು ಆಗಿರಬೇಕು ಎಂದಲ್ಲ ಎಂದ ಸಚಿನ್ ತೆಂಡೂಲ್ಕರ್, ಇಂಜಿನಿಯರ್, ಡಾಕ್ಟರ್​ ಯಾರೇ ಆದರೂ ಸಹ ತಮ್ಮನ್ನು ತಾವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಫಿಟ್​​ ಆಗಿರುವಂತೆ ನೋಡಿಕೊಳ್ಳಬೇಕು. ಜೊತೆಗೆ ಸದ್ಗುರು ಸಾಯಿ ಮಧುಸೂದನ್​ ಅವರ ಈ ಸೇವಾ ಕಾರ್ಯ ಎಲ್ಲರೂ ಮೆಚ್ಚುವಂತಹುದು. ಆಸ್ಪ್ರತ್ರೆಯಿಂದ ಆರೋಗ್ಯಕರ ಸಮಾಜ ನಿರ್ಮಾಣದ ಜೊತೆ ಶೈಕ್ಷಣಿಕ ಸೇವೆಯೂ ಗಮನಾರ್ಹವಾಗಿದೆ. ಈ ವಿಶೇಷ ಕ್ರಿಕೆಟ್​ ಪಂದ್ಯದಲ್ಲಿ ನಾನೂ ಸಹ ಭಾಗವಾಗಿರುವುದಕ್ಕೆ ಖುಷಿಯಿದೆ ಎಂದು ಸಂತಸ ವ್ಯಕ್ತಪಡಿಸಿದರು.

Related