ಸಂಸದ ಉಮೇಶ್ ಜಾಧವ್, ಶಾಸಕ ಅವಿನಾಶ್ ಜಾಧವ್‌ಗೂ ಪಾಸಿಟಿವ್

ಸಂಸದ ಉಮೇಶ್ ಜಾಧವ್, ಶಾಸಕ ಅವಿನಾಶ್ ಜಾಧವ್‌ಗೂ ಪಾಸಿಟಿವ್

ಕಲಬುರಗಿ : ಜನಪ್ರತಿನಿಧಿಗಳಿಗೆ ಶಾಕ್ ಕೊಟ್ಟಿರುವ ಕೊರೋನಾ ಇದೀಗ, ಸಂಸದ ಡಾ.ಉಮೇಶ್ ಜಾಧವ್ ಹಾಗೂ ಅವರ ಪುತ್ರ, ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ್ ಅವರಿಗೂ ಕೊರೋನಾ ಶಾಕ್ ಕೊಟ್ಟಿದೆ. ತಂದೆ ಹಾಗೂ ಪುತ್ರರಿಬ್ಬರಿಗೂ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಈ ಕುರಿತಂತೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದ ಡಾ. ಉಮೇಶ್ ಜಾಧವ್, ನನಗೂ ಕೊರೋನಾ ಸಣ್ಣ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದೆ. ನನಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಅಲ್ಲದೇ ಶಾಸಕನಾದಂತ ಪುತ್ರ ಡಾ.ಅವಿನಾಶ್ ಜಾಧವ್ ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಇಬ್ಬರೂ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ನನ್ನ ಹಾಗೂ ಪುತ್ರನ ಸಂಪರ್ಕಿತರು ಪರೀಕ್ಷೆಗೆ ಒಳಪಡುವಂತೆ ಮನವಿ ಮಾಡಿದ್ದಾರೆ.

Related