ರಾಜ್ಯ ಸರ್ಕಾರದ  ವಿರುದ್ಧ ಸಂಸದ ಪ್ರಜ್ವಲ್ ಕಿಡಿ

ರಾಜ್ಯ ಸರ್ಕಾರದ  ವಿರುದ್ಧ ಸಂಸದ ಪ್ರಜ್ವಲ್ ಕಿಡಿ

ವಿಜಯಪುರ : ಜಿಲ್ಲೆಯ ಇಂಡಿಯಲ್ಲಿ ಹಮ್ಮಿಕೊಂಡಿರುವ ಸಮಗ್ರ ನೀರಾವರಿ ಯೋಜನೆಯ ಹೋರಾಟಕ್ಕೆ ಸರ್ಕಾರ ಸ್ಪಂದನೆ ನೀಡುತ್ತಿಲ್ಲ. ಇನ್ನು ಈ ಸರ್ಕಾರ ಸತ್ತರೆಷ್ಟು, ಇದರೆಷ್ಟು ಎಂದು ರೈತರ ನೋವು ಆಲಿಸದ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದರು.

ಕಳೆದ 37 ದಿನಗಳಿಂದ ರೈತರು ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಸಮಗ್ರ ನೀರಾವರಿ ಅನುಷ್ಠಾನಕ್ಕೆ ಧರಣಿ ಸತ್ಯಾಗ್ರಹ ಮತ್ತು ವಿವಿಧ ಸ್ವರೂಪದ ಹೋರಾಟ ಮಾಡುತ್ತಿದ್ದಾರೆ. ಅದು ರಾಜ್ಯ ಮತ್ತು ಕೇಂದ್ರಕ್ಕೂ ತಲುಪಿದೆ. ಆದರೆ ಸರ್ಕಾರ ಮಾತ್ರ ಪಕ್ಷ ಸಂಘಟನೆ ಮಾಡುವಲ್ಲಿಯೇ ಮುಳಗಿ ಹೋಗಿದೆ.

ಅಲ್ಲದೇ, ರೈತರ ನೋವು, ಸಮಸ್ಯೆ ಆಲಿಸದ, ಅಹಂಕಾರ, ದುರಂಕಾರ ಹೊಂದಿದ್ದ ಪಕ್ಷವಾಗಿದೆ. ಒಂದು ವೇಳೆ ಪಕ್ಷದ ವಿರುದ್ಧ ಮಾತಾಡಿದ್ರೆ ದೇಶ ವಿರೋಧಿ ದ್ರೋಹ ಪಟ್ಟ ಕಟ್ಟುತ್ತಾರೆ. ರೈತರು ಬೇಕು ಬೇಡಿಕೆಗಳ ಹೋರಾಟ ಮಾಡಿದರೆ ಅವರನ್ನ ಟೇರರಿಸ್ಟ್ ಅಂತಾರೆಂದು ವಾಗ್ದಾಳಿ ನಡೆಸಿದರು.

ಇನ್ನೂ ಕೇಂದ್ರದಲ್ಲಿ ಒಕ್ಕೂರಲಿನಿಂದ ಧ್ವನಿ ಎತ್ತಿ ಎಂದಿದ್ದಕ್ಕೆ, ಎಲ್ಲಾ ಸಂಸದರ ಬಾಯಿ ನಾನು ಆಗಲು ಸಾಧ್ಯವಿಲ್ಲ. ಆದರೆ ನನ್ನ ಬಾಯಿ ನಾನಾಗಬಹದು. ಇಲ್ಲಿಯವರೆಗೂ ಯಾವ ಸಂಸದರು ರಾಜ್ಯದ ಪರ ರಾಜ್ಯದ ಒಂದು ಧ್ವನಿಯಾಗಿ ಮಾತಾಡಿಲ್ಲ ಮಾತಾಡಿದ್ದು ನಾನೊಬ್ಬನೆ, ಮೇಕೆದಾಟು, ಮಹಾದಾಯಿ ಬಗ್ಗೆ ಯಾರೊಬ್ಬರೂ ಒಂದೇ ಒಂದು ದಿನ ಮಾತಾಡಿಲ್ಲ. ಆದರೆ ಕೇಂದ್ರದಲ್ಲಿ ಒಕ್ಕೊರಲಿನಿಂದ ಹೋಗಿ ಅಂದ್ರಲ್ಲಾ ಅದು ಪ್ಲೈಟ್‌ಲ್ಲಿ ಮಾತ್ರ ಅಲ್ಲಿ ಇಳಿದ ನಂತರ ಮತ್ತೇ ಬೇರೆ ಬೇರೆ. ಆದರೆ ಉಳಿದ ಸಂಸದರು ಧ್ವನಿ ಆಗುತ್ತಾರೊ ಬಿಡಿತ್ತರೋ ಅದು ನನಗೆ ಸಂಶಯ ವಿದೆ ಆದರೆ ಮುಂದಿನ ಅಧಿವೇಶನದಲ್ಲಿ ಖಂಡಿತವಾಗಿಯೂ ಧ್ವನಿ ಮಾಡುತ್ತೆನೆ.

ಸುಳ್ಳು ಹೇಳಿ ಪ್ರಚಾರ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಈ ಭಾಗದ ರೈತರ ನೋವು ವೇದನೆ ಆಲಿಸಿದ್ದೇನೆ. ನಿಂಬೆ ನಾಡಿನ ರೈತರ ಆಸೆಯಂತೆ ನೀರಾವರಿ ಯೋಜನೆಗೆ ಶಕ್ತಿ ತುಂಬುತ್ತೇನೆ. ಈ ಹೋರಾಟ ಕೈ ಬಿಡುವುದಿಲ್ಲ. ಆದರೆ ಆದಷ್ಟೂ ಬೇಗ ಇಂಡಿ ನಗರದಲ್ಲಿ ದೊಡ್ಡ ಪ್ರಮಾಣದ ರೈತ ಸಮಾಲೋಚನೆ ಸಭೆ ಹಮ್ಮಿಕೊಳ್ಳುತ್ತೆವೆ ಎಂದು ಹೇಳಿದರು.

ಈ ವೇಳೆ ಶಾಸಕ ದೇವನಾಂದ ಚವ್ಹಾಣ, ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಗೇರಿ, ತಾಲೂಕು ಅಧ್ಯಕ್ಷ ಬಿ.ಡಿ ಪಾಟೀಲ, ಶ್ರೀಶೈಲಗೌಡ ಬಿರಾದರ, ಮರೆಪ್ಪ ಗಿರಣಿ ವಡ್ಡರ್ ಸಿದ್ದು ಡಂಗಾ ಮೈಬೂಬ ಬೇನೂರ ಇನ್ನಿತರರಿದ್ದರು.

Related