ತಾಯಿಯಾದ ನಟಿ ಅದಿತಿ ಪ್ರಭುದೇವ

ತಾಯಿಯಾದ ನಟಿ ಅದಿತಿ ಪ್ರಭುದೇವ

ಬೆಂಗಳೂರು: ನಾಗಕನ್ನಿಕೆ ಧಾರಾವಾಹಿ ಮಾಡುವ ಮೂಲಕ ಇಡೀ ಕರ್ನಾಟಕದಾದ್ಯಂತ ಮನೆಮಗಳಾಗಿ ಹೆಸರಾಗಿರುವ ನಟಿ ಅದಿತಿ ಪ್ರಭುದೇವ್ ಅವರು ತಾಯಿಯಾಗಿದ್ದಾರೆ.

ಇದೇ ತಿಂಗಳು ಏಪ್ರಿಲ್ 4ರಂದೇ ನಟಿ ಅದಿತಿ ಪ್ರಭುದೇವ್ ಅವರಿಗೆ ಹೆಣ್ಣು ಮಗುವಾಗಿದೆ. ಆದರೆ, ಯುಗಾದಿ ಹಬ್ಬದ ಪ್ರಯುಕ್ತ ನಮ್ಮನೆ ಮಹಾಲಕ್ಷ್ಮಿ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ,  ಮಗುವಿನ ಕೈ ತಾನು ಹಾಗೂ ಪತಿ ಯಶಸ್ ಕೈ ಮೇಲಿರುವ ಫೋಟೋವನ್ನು ಹಂಚಿಕೊಂಡು ಶುಭ ಕೋರಿದ್ದಾರೆ.

ಕಾಫಿ ಪ್ಲ್ಯಾಂಟರ್ ಯಶಸ್ ಪಾಟ್ಲಾ ಅವರನ್ನು ವಿವಾಹವಾಗಿರುವ ನಟಿ, ಕಳೆದ ಜನವರಿಯಲ್ಲಿ ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದರು. ಆ ಬಳಿಕ ಸಾಕಷ್ಟು ಸರಣಿ ಪ್ರಗ್ನೆನ್ಸಿ ಫೋಟೋಶೂಟ್‌ನ ಫೋಟೋಗಳನ್ನು ಹಂಚಿಕೊಂಡಿದ್ದರು. ಮಗು ಹುಟ್ಟುವ ವಾರದ ಮುಂಚೆ ಕೂಡಾ ನಟಿ ಫೋಟೋಶೂಟ್ ಮಾಡಿಸಿದ್ದರು. ಇದೀಗ ಅದಿತಿ ಹಂಚಿಕೊಂಡಿರುವ ಸುದ್ದಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Related