ಮತ ಚಲಾಯಿಸಿದ ಶಾಸಕ ಯತ್ನಾಳ್

ಮತ ಚಲಾಯಿಸಿದ ಶಾಸಕ ಯತ್ನಾಳ್

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತದೆ.

ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಬಿರು ಬಿಸಿಲಿನ ಜೊತೆಗೆ ಬಹಳ ಹುಮ್ಮಸ್ಸು ಉತ್ಸಾಹದಿಂದ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ಬಿಜೆಪಿ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರು ಕೂಡ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಎಲ್ಲರೂ ತಪ್ಪದೆ ಮತ ಚಲಾಯಿಸಬೇಕೆಂದು ಮತದಾರ ಬಾಂಧವರಲ್ಲಿ ಕೇಳಿಕೊಂಡರು.

ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಕುಟುಂಬ ಜೊತೆ ನಗರದ ಎಸ್ ಎಸ್ ಶಾಲೆ ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರ. ಬಹುತೇಕ ಭಾಗಗಳಲ್ಲಿ ಗಣ್ಯರು ತಮ್ಮ ‘ಗಣ್ಯತನ’ ಪ್ರದರ್ಶಿಸದೆ ಜನಸಾಮಾನ್ಯರಂತೆ ಸಾಲಲ್ಲಿ ನಿಂತು ತಮ್ಮ ಸರದಿ ಬಂದಾಗ ಮತ ಚಲಾಯಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.

 

Related