ಸಿಲಿಕಾನ್ ಸಿಟಿಯಲ್ಲಿ ರಾರಾಜಿಸುತ್ತಿವೆ ಡಿಕೆಶಿ ವಿರುದ್ಧ ಪೋಸ್ಟರ್ಗಳು..!

ಸಿಲಿಕಾನ್ ಸಿಟಿಯಲ್ಲಿ ರಾರಾಜಿಸುತ್ತಿವೆ ಡಿಕೆಶಿ ವಿರುದ್ಧ ಪೋಸ್ಟರ್ಗಳು..!

ಬೆಂಗಳೂರು‌: ಪ್ರಜ್ವಲ್ ರೇವಣ್ಣ ಆಶ್ಲೀಲ ವಿಡಿಯೋ ಪ್ರಕರಣದ ಹಿಂದೆ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಈಗಾಗಲೇ ವಕೀಲ ಮತ್ತು ಬಿಜೆಪಿ ಮುಖಂಡರಾದ ದೇವರಾಜೇಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರ ವಿರುದ್ಧ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಪೋಸ್ಟರ್ ಅಂಟಿಸಲಾಗಿದೆ.

ಯೆಸ್‌.. ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಈಗ ರಾಜ್ಯ ರಾಜಕೀಯದಲ್ಲಿ ಬಾರಿ ಚರ್ಚೆಯಾಗುತ್ತಿದ್ದು, ಇದರ ಹಿಂದೆ ಘಟಾನುಘಟಿ ನಾಯಕರುಗಳೇ ಇದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದೆ. ಆದಳಿತ ಹಾಗೂ ವಿಪಕ್ಷಗಳ ಕೆಸರೆರಚಾಟಕ್ಕೆ ಜೋರಾಗಿದೆ. ಪೆನ್ ಡ್ರೈವ್ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಪಾತ್ರವಿದೆ ಎಂದು ಆರೋಪಿಸಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ವಿವಿಧೆಡೆ ಡಿಸಿಎಂ ವಿರುದ್ಧ ಪೋಸ್ಟರ್ ಅಂಟಿಸಿದ್ದಾರೆ. ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿ ರಾತ್ರಿ ಬೆಳಗಾಗುವಷ್ಟರಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಪೋಸ್ಟರ್ ಗಳು ಪ್ರತ್ಯಕ್ಷವಾಗಿವೆ. ಲುಲು ಮಾಲ್, ಕೆಪಿಸಿಸಿ ಕಚೇರಿ ಸೇರಿದಂತೆ ಬೆಂಗಳೂರಿನ ವಿವಿಧೆಡೆಗಳಲ್ಲಿ ಡಿಸಿಎಂ ಡಿ.ಕೆ.ಶಿವಕುಮಾ‌ರ್ ಹಾಗೂ ಸಿಎಂ ಸಿದ್ಧರಾಮಯ್ಯ ವಿರುದ್ದ ಪೋಸ್ಟರ್ ಗಳನ್ನು ಅಂಟಿಸಲಾಗಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ; ಹೊಸ ಬಾಂಬ್ ಸಿಡಿಸಿದ ದೇವರಾಜೇಗೌಡ..!

ಹೆಣ್ಣು ಮಕ್ಕಳ ವೀಡಿಯೋ ಬಳಸಿಕೊಂಡು ರಾಜಕೀಯ ಮಾಡೋ ವ್ಯಭಿಚಾರಿ ಡಿ ಕೆ ಶಿವಕುಮಾರ. ಹೆಣ್ಣು ಮಕ್ಕಳ ವಿಡಿಯೋ ಬಳಸಿಕೊಂಡು ರಾಜಕೀಯ ಮಾಡೋ ಬೋಸ್ ಡಿಕೆ ನಾನು. ರಾಜಕೀಯಕೋಸ್ಕರ ಹೆಣ್ಣು ಮಕ್ಕಳ ಫೋಟೋವನ್ನೇ ಮಾರಾಟಕ್ಕಿಟ್ಟ ಲುಲು ಕುಮಾರ್‌ ಎಂದು ಬೆಂಗಳೂರಿನ ಹಲವು ಸ್ಥಳಗಳಲ್ಲಿ ಪೋಸ್ಟರ್ ರಾರಾಜಿಸುತ್ತಿವೆ.

 

Related