ಮಾನವೀಯತೆ ಮೆರೆದ ಸಚಿವ ನಿರಾಣಿ

ಮಾನವೀಯತೆ ಮೆರೆದ ಸಚಿವ ನಿರಾಣಿ

ಬೆಳಗಾವಿ: ಕಾರು ಮತ್ತು ಬಸ್ ನಡುವೆ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ಆತಂಕಗೊಂಡಿದ್ದ  ಪ್ರಯಾಣಿಕರ ಯೋಗಕ್ಷೇಮ ವಿಚಾರಿಸುವ ಮೂಲಕ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಮಾನವೀಯತೆ ಮೆರೆದಿದ್ದಾರೆ.
ಗಣರಾಜ್ಯೋತ್ಸವದ ಹಿನ್ನೆಲೆ ಧ್ವಜಾರೋಹಣ ನೆರವೇರಿಸಲು ಯಾದಗಿರಿ ಜಿಲ್ಲೆಗೆ ನಿಯೋಜನೆಗೊಂಡಿರುವ ಸಚಿವ ನಿರಾಣಿ, ಬೆಳಗಾವಿ ರಸ್ತೆ ಮಾರ್ಗವಾಗಿ ಮುಧೋಳಕ್ಕೆ ತೆರಳುತ್ತಿದ್ದರು. ಈ ವೇಳೆ ಬೆಳಗಾವಿ ಹೊರವಲಯದ ನೇಸರ್ಗಿ ಸಮೀಪ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದೇ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರು, ಅಪಘಾತವಾಗಿರುವುದನ್ನು ಗಮನಿಸಿ ಕಾರು ನಿಲ್ಲಿಸಿ ಪ್ರಯಾಣಿಕರಿಗೆ ಆಗಿರುವ ಸಮಸ್ಯೆಯನ್ನು ಖುದ್ದು ವಿಚಾರಿಸಿ ಮಾನವೀಯತೆ ಕಾಳಜಿ, ವ್ಯಕ್ತಪಡಿಸಿದರು.
ಜೊತೆಗೆ ಸ್ವತಃ ಸಚಿವರೇ ಎಲ್ಲಾ ಪ್ರಯಾಣಿಕರ ಯೋಗಕ್ಷೇಮ ವಿಚಾರಿಸಿ ಚಿಕಿತ್ಸೆಗೆ ನೆರವು ಬೇಕಾದರೆ ತಮ್ಮ ಸಹಾಯ ಪಡೆಯುವಂತೆ ಮನವಿ ಮಾಡಿದ್ದು, ಪ್ರಯಾಣಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಕುರಿತು ಮುರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related