ಜಿಲ್ಲೆಯಲ್ಲಿ ಹಾಲು ಕಳ್ಳರ ಕಾಟ..!

ಜಿಲ್ಲೆಯಲ್ಲಿ ಹಾಲು ಕಳ್ಳರ ಕಾಟ..!

ಯಾದಗಿರಿ : ಕಳೆದೆರಡು  ತಿಂಗಳಿನಿಂದ  ನಗರದಲ್ಲಿ  ನಂದಿನಿ ಹಾಲಿನ ಪ್ಯಾಕೇಟ್‌ಗಳು ಖದೀಮರ ತಂಡವೊಂದು  ಕಳ್ಳತನ ಮಾಡುತ್ತಿದ್ದು, ಇದರಿಂದ ಮಾರಾಟಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಲಿನ ವ್ಯಾಪಾರದಿಂದಲೇ ಬದುಕು ಸಾಗಿಸುತ್ತಿರುವ ಏಜೆಂಟ್‌ಗಳಿಗೆ ಈ ಖದೀಮರ ಗ್ಯಾಂಗ್ ನಿದ್ದೆಗೆಡೆಸಿದೆ.
ಕಲಬುರಗಿಯಿಂದ ತಡರಾತ್ರಿ ವಾಹನಗಳಲ್ಲಿ ಹಾಲಿನ ಪ್ಯಾಕೇಟ್ ಹೊತ್ತುತಂದ ಪೂರೈಕೆದಾರರು ಪಾರ್ಲರ್ ಹೊರಗಡೆಯೇ ಹಾಲು, ಮೊಸರಿನ ಪ್ಯಾಕೇಟ್‌ಗಳನ್ನು ಇಟ್ಟು ಹೋಗಿರುತ್ತಾರೆ. ಇದನ್ನೇ ಗಮನಿಸಿರುವ  ಗ್ಯಾಂಗ್‌ವೊಂದು  ಈ ಹಾಲಿನ ಪ್ಯಾಕೇಟ್‌ಗಳಿಗೆ ಖನ್ನಾ ಹಾಕುತ್ತಿದ್ದಾರೆ. ರಾತ್ರೊ ರಾತ್ರಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬೈಕ್ ಮೇಲೆ ಆಗಮಿಸಿ ಹಾಲಿನ ಪಾಕೆಟ್ ದೋಚುತ್ತಿದ್ದಾರೆ. ಈ ಕಳ್ಳರ ಕಳ್ಳಾಟ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ರೀತಿ ಕಳ್ಳತನ ಮಾಡಿ ಕದ್ದ ಹಾಲನ್ನು ಮಾರಾಟ ಮಾಡಿ ಗ್ಯಾಂಗ್ ಹಣಗಳಿಸುತ್ತಿದೆ.

ಈ ಬಗ್ಗೆ ಮಾರಾಟಗಾರರು ಯಾದಗಿರಿ ನಗರಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಆರೋಪಗಳನ್ನು ಪತ್ತೆ ಹಚ್ಚಿ ಬಂಧನ ಮಾಡಿ ಪದೇ ಪದೇ ಕಳ್ಳತನ ನಡೆಯದಂತೆ ಕ್ರಮಕೈಗೊಳ್ಳಬೇಕೆಂದು ದೂರು ಸಲ್ಲಿಸಿದ್ದಾರೆ. ದೂರು ನೀಡಿದರು ಪೊಲೀಸರ ಇನ್ನೂ ಹಾಲಿನ ಕಳ್ಳರ ಗ್ಯಾಂಗ್ ಪತ್ತೆ ಹಚ್ಚುವ ಕಾರ್ಯ ಮಾಡಿಲ್ಲ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಮಾರಾಟಗಾರ ದೇವು ಮಾತನಾಡಿ, ತಮ್ಮ ನೋವು ವ್ಯಕ್ತಪಡಿಸಿದರು.

ನಗರದ ರೈಲ್ವೆ ನಿಲ್ದಾಣ, ಸುಭಾಷ್ ವೃತ್ತ, ಗಾಂಧಿ ವೃತ್ತ, ಹಳೆ ಬಸ್ ನಿಲ್ದಾಣ ಮೊದಲಾದ ಕಡೆಯ ಪಾರ್ಲರ್ ಸ್ಥಳಗಳಲ್ಲಿ ಹಾಲಿಗೆ ಕನ್ನ ಹಾಕುತ್ತಿದ್ದಾರೆ. ಕಳ್ಳರ ಕಾಟದಿಂದ ಎಜೆಂಟ್ ಗಳು ನಷ್ಟ ಹೊಂದುತ್ತಿದ್ದು, ಈ ಬಗ್ಗೆ ಪೊಲೀಸರು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Related