ಕಲಬುರ್ಗಿ ವಿ.ವಿ.ಯಲ್ಲಿ ಆಫ್‌ಲೈನ್ ಪರೀಕ್ಷೆ

ಕಲಬುರ್ಗಿ ವಿ.ವಿ.ಯಲ್ಲಿ ಆಫ್‌ಲೈನ್ ಪರೀಕ್ಷೆ

ಕಲಬುರ್ಗಿ : ಜಿಲ್ಲೆಯಲ್ಲಿ ಸೋಂಕಿನಿಂದಾಗಿ ಪರೀಕ್ಷೆ ಮುಂದೂಡಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪರೀಕ್ಷೆ ನಡೆಸಲು ತೀರ್ಮಾನಿಸಿದರು, ಕೇಂದ್ರೀಯ ವಿ.ವಿ.ಯು ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಲು ಮುಂದಾಗಿದ್ದರೆ, ಗುಲಬರ್ಗಾ ವಿ.ವಿ. ಸಾಂಪ್ರದಾಯಿಕವಾಗಿ ಆಫ್‌ಲೈನ್ ಮೂಲಕವೇ ನಡೆಸಲಿದೆ.

ಕೇಂದ್ರೀಯ ವಿ.ವಿ.ಯಲ್ಲಿ ಓದುತ್ತಿರುವ 1900 ವಿದ್ಯಾರ್ಥಿಗಳ ಪೈಕಿ 691 ವಿದ್ಯಾರ್ಥಿಗಳು ಆನ್‌ಲೈನ್ ಪರೀಕ್ಷೆ ಬರೆಯಲಿದ್ದು, ಎರಡೂವರೆ ಗಂಟೆ ಅವಧಿಯನ್ನು ನಿಗದಿ ಮಾಡಲಾಗಿದೆ.

ಗುಲಬರ್ಗಾ ವಿ.ವಿ.ಯಲ್ಲಿ ಆಫ್‌ಲೈನ್ ಪರೀಕ್ಷೆ: ಗುಲಬರ್ಗಾ ವಿ.ವಿ.ಯು ಸಾಂಪ್ರದಾಯಿಕವಾಗಿ ಆಫ್‌ಲೈನ್ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ. ಮೊದಲ ಹಂತದಲ್ಲಿ ಸೆಪ್ಟೆಂಬರ್ 4ರಿಂದ 24ರವರೆಗೆ ಪದವಿ ಪರೀಕ್ಷೆಗಳು ನಡೆಯಲಿದೆ.

ಆಗಸ್ಟ್ 4, 5 ಹಾಗೂ 6ರಂದು ಆನ್‌ಲೈನ್ ಮೂಲಕ ಅಣಕು ಪರೀಕ್ಷೆಯನ್ನು ನಡೆಸಲಾಗಿದೆ. 500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು ನಮ್ಮಲ್ಲಿ ಭರವಸೆ ತಂದಿದೆ. ದೇಶದ ಎಲ್ಲ ಕೇಂದ್ರೀಯ ವಿ.ವಿ.ಗಳಲ್ಲಿ ಓದುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಗುಲಬರ್ಗಾ ವಿ.ವಿ. ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಮಾಹಿತಿ ನೀಡಿದರು.

Related