ನಮ್ಮ ರಾಣಿ ಮತ್ತೆ ಬಂದರು..

  • In Cinema
  • July 7, 2022
  • 218 Views
ನಮ್ಮ ರಾಣಿ ಮತ್ತೆ ಬಂದರು..

ಹತ್ತು ಹಲವು ಕಾರಣಗಳಿಂದಾಗಿ ಪೊನ್ನಿಯಿನ್ ಸೆಲ್ವನ್ಸಿನಿಮಾ ಹೈಪ್ ಸೃಷ್ಠಿ ಮಾಡಿದೆ. ಈ ಚಿತ್ರದಲ್ಲಿ ನಂದಿನಿ ಎಂಬ ಪಾತ್ರವನ್ನು ಐಶ್ವರ್ಯಾ ರೈ ನಿಭಾಯಿಸುತ್ತಿದ್ದಾರೆ.

ಆದರೆ ಮದುವೆ ಬಳಿಕ ಅವರು ಸಿನಿಮಾದಲ್ಲಿ ಅಷ್ಟೇನೂ ಸಕ್ರಿಯವಾಗಿಲ್ಲ. ಅಲ್ಲೊಂದು ಇಲ್ಲೊಂದು ಚಿತ್ರಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಸಿನಿಮಾ ಮಾಡುತ್ತಿದ್ದ ಅವರು ಈಗ ಸಖತ್ ಬ್ಯೂಸಿ ಆಗಿದ್ದಾರೆ. ಕಥೆ ಮತ್ತು ಪಾತ್ರವನ್ನು ಅಳೆದು-ತೂಗಿ ಅವರು ಸಿನಿಮಾ ಒಪ್ಪಿಕೊಳ್ಳುತ್ತಾರೆ.

ಐಶ್ವರ್ಯಾ ರೈ ನಟನೆಯ ಪೊನ್ನಿಯಿನ್ ಸೆಲ್ವನ್‘  ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಮೇಲೆ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಹೊಸ ಪೋಸ್ಟರ್ ಬಿಡುಗಡೆ ಆಗಿದ್ದು, ಅದನ್ನು ಕಂಡು ಫ್ಯಾನ್ಸ್ ಖುಷಿ ಆಗಿದ್ದಾರೆ. ನಮ್ಮ ರಾಣಿ ಮತ್ತೆ ಬಂದರು ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಖ್ಯಾತ ನಿರ್ದೇಶಕ ಮಣಿರತ್ನಂ. ಇದರಲ್ಲಿ ಬಹುತಾರಾಗಣ ಇದೆ. ಐಶ್ವರ್ಯಾ ರೈ, ವಿಕ್ರಮ್, ಜಯಮ್ ರವಿ, ಕಾರ್ತಿ, ತ್ರಿಷಾ, ಆರ್. ಶರತ್‌ಕಮಾರ್, ಶೋಭಿತಾ ಧೂಲಿಪಾಲಾ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಮಣಿರತ್ನಂ ಮತ್ತು ಐಶ್ವರ್ಯಾ ರೈ ಅವರು ಜೊತೆಯಾಗಿ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದು.

ಚಿತ್ರತಂಡದವರು ಹಂಚಿಕೊಂಡಿರುವ ಈ ಪೋಸ್ಟರ್ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದೆ. ಎಲ್ಲರೂ ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. 2018 ರಿಂದ ಈಚೆಗೆ ಐಶ್ವರ್ಯಾ ರೈ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಅವರನ್ನು ಚಿತ್ರಮಂದಿರದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 2022 ರ ಸೆ.30 ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಅದ್ದೂರಿಯಾಗಿ ಕಮ್‌ಬ್ಯಾಕ್ ಮಾಡಲು ಅವರಿಗೆ ಇದು ಸೂಕ್ತ ಸಿನಿಮಾ ಎಂಬುದರಲ್ಲಿ ಅನುಮಾನವಿಲ್ಲ.

Related