ದೀಪಿಕಾ ಪಡುಕೋಣೆ ಗೊಂಬೆಯಾದ್ರಾ?

 ದೀಪಿಕಾ ಪಡುಕೋಣೆ ಗೊಂಬೆಯಾದ್ರಾ?

ಮುಂಬೈ, ಮಾ. 05: ಬಾಲಿವುಡ್ ನಲ್ಲಿ ಕೆಲವು ದಿನಗಳು ವಿವಾದದ ಮಧ್ಯೆ ಸಿಕ್ಕಿಕೊಂಡ ಪದ್ಮಾವತ್  ಚಿತ್ರ ತೆರೆಕಂಡು ಅಭಿಮಾನಿಗಳ ಮನಸ್ಸು ಗೆದ್ದಿತ್ತು. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರು ಅಭಿನಯಿಸಿದ್ದರು ಪದ್ಮಾವತ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರು ರಾಣಿ ಪಾತ್ರದಲ್ಲಿ ಮಿಂಚಿದ್ದಾರೆ. ಈಗ ದೀಪಿಕಾ ಪಡುಕೋಣೆ ರಾಣಿ ಪಾತ್ರದ ಗೊಂಬೆಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿವೆ.

ಹೌದು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಗೊಂಬೆ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ. ದೀಪಿಕಾ ಪಡುಕೋಣೆ ಪದ್ಮಾವತ್ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ವಿವಾದದ ಮಧ್ಯೆ ಪದ್ಮಾವತ್ ಅಭಿನಯಕ್ಕೆ ದೀಪಿಕಾ ಮೆಚ್ಚುಗೆ ಗಳಿಸಿದ್ದರು. ಈಗ ಪದ್ಮಾವತ್ ಅವತಾರದಲ್ಲಿರುವ ದೀಪಿಕಾ ಬೊಂಬೆಗಳು ಮಾರುಕಟ್ಟೆಗೆ ಬಂದಿವೆ.

ದೀಪಿಕಾ ರಾಣಿ ಪದ್ಮಾವತಿಯಾಗಿರುವ ಗೊಂಬೆ ತಯಾರಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಯಲ್ ಬಟ್ಟೆ ಮತ್ತು ಆಭರಣಗಳಿಂದ ಅಲಂಕಾರಗೊಂಡಿರುವ ಈ ಗೊಂಬೆ, ದೀಪಿಕಾ ರಾಣಿ ಅವತಾರ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ದೀಪಿಕಾ ಪಡುಕೋಣೆ ಸದ್ಯ ಪತಿ ರಣವೀರ್ ಸಿಂಗ್ ಜೊತೆಗೆ 83 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಇದೇ ವರ್ಷ ತೆರೆಗೆ ಬರಲಿದೆ. ದೀಪಿಕಾ ಕೈನಲ್ಲಿ ಇನ್ನೂ ಎರಡು ಸಿನಿಮಾ ಇದ್ದು, ಮಹಾಭಾರತ ಚಿತ್ರದಲ್ಲಿ ದ್ರೌಪದಿ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ.

Related