ಇಂದು ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯ

ಇಂದು ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೀಮ್ ಇಂಡಿಯಾ ಬ್ಯಾಟರ್‌ಗಳು ಆಫ್ರಿಕಾದ ಸವಾಲಿಗೆ ಸಜ್ಜಾಗುತ್ತಿದ್ದಾರೆ. ಸೆಂಚುರಿಯನ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಸೂಪರ್​​ ಸ್ಪೋರ್ಟ್ ಪಾರ್ಕ್ ಸ್ಟೇಡಿಯಂನಲ್ಲಿ ಫಸ್ಟ್ ಟೆಸ್ಟ್ ನಡೀತಿದೆ. ಇಲ್ಲಿನ ಪಿಚ್ ಹೇಗಿದೆ? ಏನೆಲ್ಲಾ ಚಾಲೆಂಜಸ್​​ಗಳು ಎದುರಾಗಬಹುದು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತ – ದಕ್ಷಿಣ ಆಫ್ರಿಕಾ ನಡುವಿನ ಫಸ್ಟ್ ಟೆಸ್ಟ್​ ಮ್ಯಾಚ್ ನಡೀತಿರೋ ಸೆಂಚೂರಿಯನ್ ಗ್ರೌಂಡ್​ನ ಪಿಚ್​ನ್ನ ಪೇಸ್ ಬೌಲರ್ಸ್​ಗಳು ನಿಜಕ್ಕೂ ಎಂಜಾಯ್ ಮಾಡಲಿದ್ದಾರೆ. ಸೌತ್ ಆಫ್ರಿಕಾ ಮತ್ತು ಟೀಂ ಇಂಡಿಯಾ ಎರಡೂ ತಂಡದ ಫಾಸ್ಟ್ ಬೌಲರ್ಸ್​ಗಳಿಗೆ ಈ ಪಿಚ್ ಫೇವರೇಟ್ ಆಗಬಹುದು. ಯಾಕಂದ್ರೆ ಇದು ಪೇಸ್ ಮತ್ತು ಬೌನ್ಸಿ ಪಿಚ್ ಆಗಿದ್ದು, ಬ್ಯಾಟ್ಸ್​​ಮನ್​​ಗಳಿಗೆ ನಿಜಕ್ಕೂ ಚಾಲೆಂಜಿಂಗ್ ಆಗಿರಲಿದೆ. ಇಂಗ್ಲೆಂಡ್​, ಆಸ್ಟ್ರೇಲಿಯಾ ಪಿಚ್​​ಗಳಂತೆ ಇಲ್ಲಿ ಬಾಲ್ ಹೆಚ್ಚು ಸ್ವಿಂಗ್ ಆಗಲ್ಲ.

 

Related