ಕಲಬುರಗಿಯಲ್ಲಿ ಕ್ರೂಜರ್ ಪಲ್ಟಿ

ಕಲಬುರಗಿಯಲ್ಲಿ ಕ್ರೂಜರ್ ಪಲ್ಟಿ

ಕಲಬುರಗಿ, ಮಾ. 3 : ಟೈರ್ ಸ್ಫೋಟಗೊಂಡು ಕ್ರೂಸರ್ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಂಚೋಳಿ ತಾಲೂಕಿನ ಯಲಮಾಮಡಿ ಸಮೀಪ ಸೋಮವಾರ ನಡೆದಿದೆ.
ಯಲಮಾಮಡಿ ಪುನರ್ವಸತಿ ಕೇಂದ್ರ-2ರ ನಿವಾಸಿ ಶಾಮರಾವ್(65) ಹಾಗೂ ಯಲಮಾಮಡಿ ತಾಂಡಾನಿವಾಸಿ ಮೋತಿಬಾಯಿ(55) ಮೃತ ದುರ್ದೈವಿಗಳು.
ಘಟನೆಯಲ್ಲಿ 10 ಜನರಿಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿ ಹಾಗೂ ಬೀದರ್ ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related