ವಲಸಿಗರಿಗೆ ‘ನೋ ಎಂಟ್ರಿ’ ಎಂದ ಅಮೆರಿಕ ಅಧ್ಯಕ್ಷ!

ವಲಸಿಗರಿಗೆ ‘ನೋ ಎಂಟ್ರಿ’ ಎಂದ ಅಮೆರಿಕ ಅಧ್ಯಕ್ಷ!

ವಾಷಿಂಗ್ಟನ್, ಏ. 21 : ಕೊರೊನಾ ವೈರಸ್ ದಾಳಿಗೆ ಸಿಕ್ಕು ನಲುಗಿರುವ ಅಮೇರಿಕ, ತನ್ನ ರಕ್ಷಣೆಗೆ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡುತ್ತಿದೆ. ಅದರಂತೆ ದಿನಕ್ಕೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕನ್ನರು, ದೇಶದ ಅರ್ಥ ವ್ಯವಸ್ಥೆ ಉಳಿಸುವ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ.ಅದರಂತೆ ಅಮೆರಿಕನ್ನರ ಉದ್ಯೋಗ ಕಾಪಾಡುವ ನಿಟ್ಟಿನಲ್ಲಿ ವಲಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ.
ಕುರಿತು ಖುದ್ದು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಡೊನಾಲ್ಡ್ ಟ್ರಂಪ್, ಕೊರೊನಾ ವೈರಸ್ಹರಡುವಿಕೆ ನಿಯಂತ್ರಿಸಲು ಹಾಗೂ ಅಮೆರಿಕನ್ನರ ಉದ್ಯೋಗ ಕಾಪಾಡಲು ವಸಿಗರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Related