ಹಾರ್ದಿಕ್ ಪಾಂಡ್ಯನ ಹೊಸ ದಾಖಲೆ!

  • In Sports
  • August 9, 2023
  • 200 Views
ಹಾರ್ದಿಕ್ ಪಾಂಡ್ಯನ ಹೊಸ ದಾಖಲೆ!

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ20 ಪಂದ್ಯ ಅತ್ಯಂತ ರೋಚಕದಿಂದ ಕೂಡಿತ್ತು, ಮೊದಲ 2 ಪಂದ್ಯ ಭಾರತ ಸೋಲಿನ ಅನುಭವ ಕಂಡಿತು. ಆದರೆ ನಿನ್ನೆ ನಡೆದ ಪಂದ್ಯ ಭಾರತಕ್ಕೆ ನಿರ್ಣಾಯಕವಾಗಿತ್ತು. ಭಾರತ ಭರ್ಜರಿಯಾಗಿ ಗೆಲುವನ್ನು ಸಾಧಿಸಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ವಿಂಡೀಸ್ ನೀಡಿದ 159 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಇನ್ನು 13 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.

ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರೆ, ಸೂರ್ಯಕುಮಾರ್ ಯಾದವ್ 83 ರನ್ ಹಾಗೂ ತಿಲಕ್ ವರ್ಮಾ ಅಜೇಯ 49 ರನ್ಗಳ ಇನ್ನಿಂಗ್ಸ್ ಆಡಿದರು. ಇವರೊಂದಿಗೆ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಅಜೇಯ 20 ರನ್ ಬಾರಿಸಿದರು.

ಅದರಲ್ಲೂ 17ನೇ ಓವರ್ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಹಾರ್ದಿಕ್ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದು ವಿಶೇಷವಾಗಿತ್ತು. ಅಲ್ಲದೆ ಈ ಗೆಲುವಿನ ಸಿಕ್ಸರ್ ಜೊತೆಗೆ ಪಾಂಡ್ಯ, ಕೊಹ್ಲಿ ದಾಖಲೆಯನ್ನು ಮುರಿದರು.

ವಾಸ್ತವವಾಗಿ ಸಿಕ್ಸರ್ ಸಿಡಿಸುವ ಮೂಲಕ ಜಯ ತಂದುಕೊಟ್ಟ ಪಾಂಡ್ಯ, ಟಿ20ಯಲ್ಲಿ ಈ ರೀತಿಯಾಗಿ ಅಂದರೆ, ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು 4ನೇ ಬಾರಿಗೆ ಗೆಲುವಿನ ದಡ ಮುಟ್ಟಿಸಿದರು. ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಈ ಚುಟುಕು ಮಾದರಿಯಲ್ಲಿ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ 4 ಬಾರಿ ಗೆಲುವು ತಂದುಕೊಟ್ಟಿದ್ದಾರೆ. ಇದೀಗ ಈ ದಾಖಲೆಯನ್ನು ಪಾಂಡ್ಯ ಸರಿಗಟ್ಟಿದ್ದಾರೆ.

Related