ರೌಡಿಶೀರ್ ಗೆ ಗುಂಡೇಟು

ರೌಡಿಶೀರ್ ಗೆ   ಗುಂಡೇಟು

ಕಲಬುರ್ಗಿ : ಜಿಲ್ಲೆಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಕುಖ್ಯಾತ ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ.
ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದ ರೌಡಿಶೀಟರ್ ಮಿರ್ಜಾ ಫಯೀಮ್ ಬೇಗ್‌ನ ಕಾಲಿಗೆ ಎರಡು ಸುತ್ತಿನ ಗುಂಡು ಹೊಡೆದ ಘಟನೆ ಕಲಬುರ್ಗಿ ಹೊರವಲಯದ ಕೆಸರಟಗಿ ಗ್ರಾಮದ ಬಳಿ ನಡೆದಿದೆ.

ಜಿಲ್ಲೆಯಲ್ಲಿ ಕೊನೆಗೂ ಪೊಲೀಸರು ತಮ್ಮ ಬಂದೂಕಿಗೆ ಕೆಲಸ ಹಚ್ಚಿದ್ದಾರೆ. ಕಳೆದ ಕೆಲ ದಿನಗಳಿಂದ ನಗರದಲ್ಲಿ ರಕ್ತದೋಕುಳಿ ನಡೆಸಿದ್ದ ರೌಡಿಗಳಿಗೆ ಗುಂಡಿನ ರುಚಿ ತೋರಿಸಿದ್ದಾರೆ. ಕುಖ್ಯಾತ ರೌಡಿ ಮಿರ್ಜಾ ಫಯೀಂ ಬೇಗ್ ಮೇಲೆ ಗುಂಡಿನ ದಾಳಿ ಮಾಡಲಾಗಿದೆ.
ಸಾಗರ್ ಎಂಬ ಯುವಕನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಫಯೀಮ್ ನನ್ನು ಬಂಧಿಸಿದ್ದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಆಯುಧ ಜಪ್ತಿಗೆಂದು ಕೆಸರಟಗಿ ಬಳಿ ಕರೆದೊಯ್ದಿದ್ದರು.

ಈ ವೇಳೆ ಕೃತ್ಯಕ್ಕೆ ಬಳಸಿದ್ದ ಮಾಸಕಾಸ್ತ್ರ ತೋರಿಸಿ, ಅದರ ಮೂಲಕವೇ ಪೊಲೀಸರ ಮೇಲೆ ದಾಳಿ ಮಾಡಿದ್ದ. ಇಬ್ಬರು ಪೊಲೀಸ್ ಪೇದೆಗಳಿಗೆ ಗಾಯಗಳಾಗಿದ್ದವು. ತಕ್ಷಣ ಕಾರ್ಯಪ್ರವೃತ್ತರಾದ ಸ್ಟೇಷನ್ ಬಜಾರ್ ಪೊಲೀಸ್ ಇನ್ಸಪೆಕ್ಟರ್ ಎಲ್.ಎಚ್.ಗೌಂಡಿ, ರೌಡಿ ಫಯೀಮ್ ಗೆ ಗುಂಡಿನ ರುಚಿ ತೋರಿಸಿದ್ದಾರೆ.

ಜೂನ್ 29 ರಂದು ಪಿ ಆಯಂಡ್ ಟಿ ಕಾಲೋನಿ ಬಳಿ ನಡೆದಿದ್ದ ಸಾಗರ್ ಕೊಲೆ ಯತ್ನ ಪ್ರಕರಣಕ್ಕೆ ಸಂಬAಧಿಸಿ ಆಯುಧ ಜಪ್ತಿ ಮಾಡಲು ಹೋದಾಗ ಘಟನೆ ನಡೆದಿದೆ. ಫಯೀಮ್ ಕಾಲಿಗೆ ಎರಡು ಸುತ್ತಿನ ಗುಂಡು ಹೊಡೆಯಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೂ ಜಾಲ ಬೀಸಲಾಗಿದೆ ಎಂದು ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.

ಸ್ಟೇಷನ್ ಬಜಾರ್ ಠಾಣೆಯ ಹೆಡ್ ಕಾನಸ್ಟೇಬಲ್ ಅಂಬಾದಾಸ್ ಮತ್ತು ಪೇದೆ ರಫೀಕ್ ಗೆ ಗಾಯಗಳಾಗಿವೆ. ಗಾಯಗೊಂಡ ಪೊಲೀಸರು ಯುನೈಟೆಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related