ಗುಂಡೇಟಿಗೆ ಭಾರತೀಯ ಬಲಿ

ಗುಂಡೇಟಿಗೆ ಭಾರತೀಯ ಬಲಿ

ವಾಷಿಂಗ್ಟನ್, ಫೆ. 24 : ಅಮೆರಿಕದ ಲಾಸ್ ಏಂಜಲೀಸ್ನಲ್ಲಿರುವ ದಿನಸಿ ಅಂಗಡಿಗೆ ನುಗ್ಗಿದ ಮುಸುಕುಧಾರಿಗಳು ಭಾರತ ಮೂಲದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಮೃತಪಟ್ಟ ಯುವಕನನ್ನು ಮನೀಂದರ್ ಸಿಂಗ್ ಸಾಹಿ ಎಂದು ಗುರುತಿಸಲಾಗಿದೆ. ಹರಿಯಾಣ ರಾಜ್ಯದ ಕರ್ನಲ್ ನಿವಾಸಿ.ಮನೀಂದರ್ ಸಿಂಗ್ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಇರುವ ದಿನಸಿ ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದರು. ಕಳ್ಳತನ ಮಾಡಲು ಬಂದ ಇಬ್ಬರು ದುಷ್ಕರ್ಮಿಗಳು, ದರೋಡೆಗೆ ಅಡ್ಡಬಂದ ಮನೀಂದರ್ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. 31 ವರ್ಷದವನಾಗಿದ್ದ ಮನೀಂದರ್ 6 ತಿಂಗಳ ಹಿಂದಷ್ಟೇ ಲಾಸ್ ಏಂಜಲೀಸ್ಗೆ ತೆರಳಿದ್ದರು.

ಮಾಸ್ಕ್ ಧರಿಸಿ ಬಂದ ಇಬ್ಬರು ಕ್ಯಾಷಿಯರ್ ಕೌಂಟರ್ನತ್ತ ಧಾವಿಸಿ, ಹಣ ದೋಚಲು ಮುಂದಾಗಿದ್ದರು. ಆಗ ಕ್ಯಾಷಿಯರ್ ಕೌಂಟರ್ನಲ್ಲಿ ಕುಳಿತಿದ್ದ ಮನೀಂದರ್ ಸಿಂಗ್ ಅಡ್ಡಬಂದಿದ್ದರು. ಆಗ ಆತನ ಮೇಲೆ ಗುಂಡು ಹಾರಿಸಿದ ದರೋಡೆಕೋರರು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯ ಸ್ಟೋರ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಇಬ್ಬರು ದುಷ್ಕರ್ಮಿಗಳು ಮುಸುಕು ಧರಿಸಿ ಬಂದಿದ್ದರಿಂದ ಅವರು ಯಾರೆಂಬುದು ಪತ್ತೆಯಾಗಿಲ್ಲ.

Related