ವಾಹನಸವಾರರಿಗೆ ಗುಡ್ ನ್ಯೂಸ್

ವಾಹನಸವಾರರಿಗೆ ಗುಡ್ ನ್ಯೂಸ್

ಕಲಬುರಗಿ : ಸರ್ವೋಚ್ಛ ನ್ಯಾಯಾಲಯದ ಆದೇಶದಡಿ ಲಾಕ್‍ಡೌನ್ ಅವಧಿಯ ಮುಂಚಿತವಾಗಿ 2020ರ ಮಾರ್ಚ್ 24 ರವರೆಗೆ ಭಾರತ ಸ್ಟೇಜ್-4 ಮಾರಾಟವಾಗಿ, ಇ-ವಾಹನ ಪೋರ್ಟಲ್ನಲ್ಲಿ ನಮೂದಿತವಾಗಿ, ನೋಂದಣಿಯಾಗದೇ ಉಳಿದಿರುವ ಭಾರತ ಸ್ಟೇಜ್-4 ಮಾಪನದ ಹೊಸ ವಾಹನಗಳನ್ನು ಮಾತ್ರ ನಿಯಮಾನುಸಾರ ನೋಂದಾಯಿಸಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಈ ಕುರಿತು ಇ-ವಾಹನ ಪೊರ್ಟಲ್ನಲ್ಲಿ ವಿವರವನ್ನು ಕೂಲಂಕುಷವಾಗಿ ಪರಿಶೀಲಿಸಿ, ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಭಾರತ ಸ್ಟೇಜ್-4 ಹೊಸ ವಾಹನಗಳ ನೋಂದಣಿ ಮಾಡಿಕೊಳ್ಳಬೇಕೆಂದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related