ನಡು ರಸ್ತೆಯಲ್ಲಿ ಕ್ರೂಸರ್‍ಗೆ ಬೆಂಕಿ

ನಡು ರಸ್ತೆಯಲ್ಲಿ ಕ್ರೂಸರ್‍ಗೆ ಬೆಂಕಿ

ಮುದ್ದೇಬಿಹಾಳ : ತಾಂತ್ರಿಕ ದೋಷದಿಂದ ಕ್ರೂಸರ್‍ನಲ್ಲಿ ಬೆಂಕಿ ಕಂಡು ಬಂದಿದ್ದು, ನಡು ರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆ ತಾಲೂಕಿನ ಮದರಿ ಕ್ರಾಸ್ ಬಳಿ ನಡೆದಿದೆ.

ಕ್ರೂಸರ್ ಹುನಗುಂದ ತಾಲೂಕಿನ ಮರೋಳ ಗ್ರಾಮದ್ದೆಂದು ಹೇಳಲಾಗುತ್ತಿದ್ದು, ಮುದ್ದೇಬಿಹಾಳ ತಾಲೂಕಿನ ಗ್ರಾಮವೊಂದರಲ್ಲಿ ನಡೆಯಲಿದ್ದ ಮದುವೆಗೆ ಜನರನ್ನು ಕರೆದೊಯ್ಯುತ್ತಿತ್ತು. ಈ ವೇಳೆ ಏಕಾಏಕಿ ಬಾನೆಟ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ತಕ್ಷಣ ಎಚ್ಚೆತ್ತ ಚಾಲಕ ವಾಹನದಲ್ಲಿದ್ದವರನ್ನು ಕೆಳಗಿಳಿಸಿದ್ದಾನೆ. ನೋಡು ನೋಡುತ್ತಲೇ ಬೆಂಕಿ ಕ್ರೂಸರ್‍ಗೆ ಆವರಿಸಿದೆ.

ಮೂಲಗಳ ಪ್ರಕಾರ ಬ್ಯಾಟರಿ ವೈರ್‍ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಕ್ರೂಸರ್‍ಗೆ ಬೆಂಕಿ ಬಿದ್ದಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Related