ಮಹದೇಶ್ವರ ಬೆಟ್ಟಕ್ಕೆ ಭಕ್ತರಿಗಿಲ್ಲ ಪ್ರವೇಶ!

ಮಹದೇಶ್ವರ ಬೆಟ್ಟಕ್ಕೆ ಭಕ್ತರಿಗಿಲ್ಲ ಪ್ರವೇಶ!

ಚಾಮರಾಜನಗರ : ಕೋವಿಡ್-19 ಕಾರಣದಿಂದಾಗಿ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಬಾರಿ ದೀಪಾವಳಿ ಜಾತ್ರೆಯೂ ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿ ನಡೆಯಲಿದೆ.

ಇದೇ 13ರಿಂದ 16ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಬೇಕಾಗಿದ್ದು, ನಾಲ್ಕೂ ದಿನಗಳ ಕಾಲ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ.

ದಸರಾ ಜಾತ್ರಾ ಮಹೋತ್ಸವದ ಸಂದರ್ಭದಲ್ಲೂ ಭಕ್ತರಿಗೆ ಅವಕಾಶ ನೀಡಿರಲಿಲ್ಲ. ಜಾತ್ರೆಗೆ ನಿರ್ಬಂಧ ವಿಧಿಸುವ ಸಾಧ್ಯತೆ ಇದ್ದುದರಿಂದ ದೀಪಾವಳಿ ಸಮಯದಲ್ಲಿ ವಸತಿಗೃಹಗಳನ್ನು ಆನ್‌ಲೈನ್ ಮೂಲಕ ಕಾಯ್ದಿರಿಸುವ ವ್ಯವಸ್ಥೆಯನ್ನು ಕ್ಷೇತ್ರ ‘ರಥೋತ್ಸವ ಇರುವುದಿಲ್ಲ. ಜಾತ್ರೆಯ ಅಂಗವಾಗಿ ಹಾಲರವೆ ಮತ್ತು ತೆಪ್ಪೋತ್ಸವ ಮಾತ್ರ ಸ್ಥಳೀಯವಾಗಿ ನಡೆಯಲಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ತಿಳಿಸಿದ್ದಾರೆ

Related