“ಎಮರ್ಜೆನ್ಸಿ” ಚಿತ್ರದ ಫಸ್ಟ್ ಲುಕ್..

  • In Cinema
  • July 14, 2022
  • 229 Views
“ಎಮರ್ಜೆನ್ಸಿ” ಚಿತ್ರದ ಫಸ್ಟ್ ಲುಕ್..

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ ಆಧಾರಿತ ಸಿನಿಮಾ ಒಂದು ಸಿದ್ಧವಾಗುತ್ತಿದ್ದು, ಚಿತ್ರಕ್ಕೆ ‘ಎಮರ್ಜೆನ್ಸಿ ’  ಎಂದು ಟೈಟಲ್ ಅನೌನ್ಸ್ ಮಾಡಲಾಗಿದೆ. ಅಲ್ಲದೇ ಫಸ್ಟ್​ ಲುಕ್​ ವಿಡಿಯೋ ಸಹ ಬಿಡುಗಡೆ ಆಗಿದೆ. ಬಾಲಿವುಡ್​ ನಲ್ಲಿ ಕಳೆದ ಕೆಲ ವರ್ಷಗಳಿಂದ ನೈಜ ಕಥೆ ಮತ್ತು ಪ್ರಸಿದ್ಧ ವ್ಯಕ್ತಿಗಳ ಬಯೋಪಿಕ್ ಗಳನ್ನು ಮಾಡುತ್ತಿರುವುದನ್ನು ನಾವು ನೋಡಿದ್ದೇವೆ.

ಅದರಲ್ಲಿಯೂ ಚಿತ್ರತಾರೆಯರು, ಕ್ರೀಡಾ ಲೋಕದ ದಿಗ್ಗಜರ ಕುರಿತು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಇದೀಗ ದೇಶ ಕಂಡ ಪ್ರಸಿದ್ಧ ರಾಜಕಾರಣಿ ಬಗ್ಗೆ ಸಿನಿಮಾವೊಂದು ಸಿದ್ಧವಾಗುತ್ತಿದೆ. ಹೌದು, ಬಾಲಿವುಡ್​ ಫೈರ್ ಬ್ರ್ಯಾಂಡ್ ಕಂಗನಾ ರನೌತ್ಮತ್ತೊಂದು ಬಯೋಪಿಕ್ ಸಿನಿಮಾದ ಮೂಲಕ ಕಮಾಲ್ ಮಾಡಲು ಸಿದ್ಧರಾಗಿದ್ದಾರೆ.

ಜೈಲಲಿತಾ ಅವರ ಜೀವನ ಆಧಾರಿತ ಸಿನಿಮಾದಲ್ಲಿ ನಟಿಸುವ ಮೂಲಕ ಮೆಚ್ಚುಗೆ ಗಳಿಸಿದ್ದ ಕಂಗನಾ ಇದೀಗ ದೇಶಕಂಡ ಏಕೈಕ ಮಹಿಳಾ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರ ಬಯೋಪಿಕ್​ ನಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರದ ಫಸ್ಟ್ ಲುಕ್ ಕೂಡ ರಿವೀಲ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ.

ಹೌದು, ಇದೇ ಮೊದಲ ಬಾರಿಗೆ ಇಂದಿರಾ ಗಾಂಧಿ ಅವರ ಜೀವನ ಆಧಾರಿತ ಸಿನಿಮಾ ಒಂದು ಸಿದ್ಧವಾಗುತ್ತಿದ್ದು, ಈ ಚಿತ್ರಕ್ಕೆ ‘ಎರ್ಮಜೆನ್ಸಿ’  ಎಂದು ಟೈಟಲ್ ಅನೌನ್ಸ್ ಮಾಡಲಾಗಿದೆ. ಅಲ್ಲದೇ ಫಸ್ಟ್​ ಲುಕ್​ ವಿಡಿಯೋ ಸಹ ಬಿಡುಗಡೆ ಆಗಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ಬಾಲಿವುಡ್ ಬ್ಯೂಟಿ ಕಂಗನಾ ರನೌತ್ ಅಭಿನಯಿಸುತ್ತಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಕಂಗನಾ ಥೇಟ್ ಇಂದಿರಾ ಗಾಂಧಿಯಂತೆಯೇ ಕಾಣಿಸಿಕೊಳ್ಳುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಈಗಾಗಲೇ ಹೆಚ್ಚುವಂತೆ ಮಾಡಿದ್ದಾರೆ.

Related