ಹೊಸ ಲುಕ್ ನಲ್ಲಿ ಕನಸಿನ ರಾಣಿ

ಹೊಸ ಲುಕ್ ನಲ್ಲಿ ಕನಸಿನ ರಾಣಿ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಮಾಲಾಶ್ರೀ ಅವರು, ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಮಾಲಾಶ್ರೀ ಅವರ ಮಗಳು ಸಹ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಇದೀಗ ಅಮ್ಮ ಮಗಳು ಇಬ್ಬರು ದೀಪಾವಳಿ ಹಬ್ಬಕ್ಕೆ ಸೀರೆ ಉಟ್ಟು ತಮ್ಮ ಮನೆಯಲ್ಲಿ ಬಹಳ ಸಡಗರ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ.

ಮಾಲಾಶ್ರೀ ಅವರು ಯಾವ ಪತ್ರ ಕೊಟ್ಟರು ಆ ಪಾತ್ರ ನಿರ್ವಹಿಸಿ ಆ ಪಾತ್ರಕ್ಕೆ ಒಂದು ಜೀವ ತುಂಬಿವ ಶಕ್ತಿಯವರಲ್ಲಿದೆ. ಅದರಂತೆ ಅವರ ಮಗಳು ಆರಾಧನಾ ನಟ ದರ್ಶನ್ ಅವರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರ ಶೂಟಿಂಗ್ ಹಂತದಲ್ಲಿದ್ದು ಇನ್ನೇನು ಕೆಲವೇ ತಿಂಗಳಗಳಲ್ಲಿ ಚಿತ್ರ ತೆರಿಗೆ ಬರುವ ನಿರೀಕ್ಷೆ ಇದೆ.

ಇನ್ನು ನಟಿ ಮಾಲಾಶ್ರೀ ಅವರು, ನಾಡಿನ ಸಮಸ್ತ ಜನತೆಗೆ ದೀಪಾವಳಿ ಶುಭಾಶಯ ತಿಳಿಸುತ್ತೇನೆ. ಬಹಳ ವರ್ಷಗಳ ನಂತರ ನಾನು ಫೋಟೊ ಶೂಟ್ ಮಾಡಿಸಿಕೊಂಡಿದ್ದೀನಿ. ಮಗಳ ಜೊತೆಗೆ ಫೋಟೊ ಶೂಟ್ ಮಾಡಿಸಿಕೊಂಡಿರುವುದು ಹೆಚ್ಚು ಖುಷಿಯಾಗಿದೆ. ಈ ವರ್ಷ ನನ್ನ ಮಗಳು “ಕಾಟೇರ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾಳೆ. ನನಗೆ ತಾವು ನೀಡಿರುವ ಪ್ರೋತ್ಸಾಹ ನನ್ನ ಮಗಳಿಗೂ ನೀಡಿ ಎನ್ನುತ್ತಾರೆ ನಟಿ ಮಾಲಾಶ್ರೀ.

Related