ಬ್ಯಾಂಕ್ ಸಿಬ್ಬಂದಿಗೂ ಕೊರೋನಾ

ಬ್ಯಾಂಕ್ ಸಿಬ್ಬಂದಿಗೂ ಕೊರೋನಾ

ಕಲಬುರ್ಗಿ : ಕಲಬುರ್ಗಿಯಲ್ಲಿ ಬ್ಯಾಂಕ್ ಸಿಬ್ಬಂದಿಗೂ ಕೊರೋನಾ ವಕ್ಕರಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ.

ಕಲಬುರ್ಗಿಯ ಸಂಗಮೇಶ್ವರ ಕಾಲೋನಿಯ ಶಾಖೆ ಸಿಬ್ಬಂದಿಗೆ ಸೋಂಕು ತಗುಲಿದ್ದು, ಸಂಗಮೇಶ್ವರ ಕಾಲೋನಿ ಗ್ರಾಹಕರಿಗೆ ಬೇರೆ ಶಾಖೆಗಳಲ್ಲಿ ವ್ಯವಹರಿಸುವಂತೆ ಮನವಿ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಶಾಖೆ ರೀ ಓಪನ್ ಇರುವುದಿಲ್ಲ.

ಗ್ರಾಹಕರಿಗೆ ಬೇರೆ ಶಾಖೆಯಲ್ಲಿ ವ್ಯವಹಾರಕ್ಕೆ ಅವಕಾಶ ನೀಡಲಾಗಿದೆ. ಕೊರೋನಾ ವಾರಿಯರ್ಸ್ ನಂತರ ಬ್ಯಾಂಕ್ ಸಿಬ್ಬಂದಿಗೂ ಸೋಂಕು ವಕ್ಕರಿಸಿದೆ. ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸಿಬ್ಬಂದಿಗೆ ಸೋಂಕು ಹರಡಿದ್ದು, ಬ್ಯಾಂಕ್ ನೌಕರರಲ್ಲಿಯೂ ಭೀತಿ ಸೃಷ್ಟಿಸಿದೆ.

Related