ಹೊಸಕೋಟೆಯಲ್ಲಿ ಮುಂದುವರಿದ ದ್ವೇಷ ಗಲಭೆ

ಹೊಸಕೋಟೆಯಲ್ಲಿ ಮುಂದುವರಿದ ದ್ವೇಷ ಗಲಭೆ

ಹೊಸಕೋಟೆ: ಹೊಸಕೋಟೆ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಎಂಟಿಬಿ ನಾಗರಾಜ್ ಕುಟುಂಬಕ್ಕೂ ಮತ್ತು ಶರತ್ ಬಚ್ಚೇಗೌಡ ಅವರ ಕುಟುಂಬದ ಮಧ್ಯ ಹಲವಾರು ಕಾರಣಗಳಿಂದ ದ್ವೇಷವಿದ್ದು 2023ರ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಅವರು ಗೆದ್ದು ಬಂದಿದ್ದಾರೆ

ಹೌದು, ದಶಕಗಳಿಂದಲೂ ಎಂಟಿಬಿ ಮತ್ತು ಬಚ್ಚೇಗೌಡ ಕುಟುಂಬದ ನಡುವೆ ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಈ ಭಾರಿ ಕೂಡ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಅವರು ಎಂಟಿಬಿ ನಾಗರಾಜ್ಬಅವರ ವಿರುದ್ದ ಎರಡನೆ ಭಾರಿಗೆ ಗೆದ್ದು ಬೀಗಿದ್ದಾರೆ. ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದೇ ತಡ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ದ್ವೇಷ ಗಲುಬೆ ಶುರುವಾಗಿದೆ. ನಿನ್ನೆ ಇದೇ ವಿಚಾರದಲ್ಲಿ ಕೊಲೆಯೊಂದು ನಡೆದಿತ್ತು. ಈಗ ಪಾರ್ವತಿಪುರದಲ್ಲಿ ಎಂಟಿಬಿ ಬೋರ್ಡ್ ದ್ವಂಸ ಮಾಡಲಾಗಿದೆ.

ಪಾರ್ವತಿಪುರ ಸರ್ಕಲ್​ನಲ್ಲಿ ಅಳವಡಿಸಿದ್ದ ಎಂಟಿಬಿ ವೃತ್ತ ಎನ್ನುವ ಬೋರ್ಡ್ ಅನ್ನು ಕಳೆದ ರಾತ್ರಿ ಕೆಲ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ರಾಜಕೀಯ ವೈಷಮ್ಯದಿಂದ ಮಾಡ್ತಿದ್ದಾರೆ ಅಂತ ಎಂಟಿಬಿ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ.

 

Related