ಭ್ರಷ್ಟಾಚಾರ: ಕ್ರಮಕ್ಕೆ ಆಗ್ರಹ

ಭ್ರಷ್ಟಾಚಾರ: ಕ್ರಮಕ್ಕೆ ಆಗ್ರಹ

ಕಾಗವಾಡ: ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭೂಸುಧಾರಣಾ ಕಾಯಿದೆ ತಿದ್ದುಪಡಿ ವಾಪಸ್ಸು ಪಡೆಯಬೇಕು. ಕೊರೋನಾ ರೋಗದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅದನ್ನು ನ್ಯಾಯಾಧೀಶರಿಂದ ಸೂಕ್ತ ತನಿಖೆ ಕೈಗೊಂಡು ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಗವಾಡ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಗುರುವಾರ ರಂದು ಕಾಗವಾಡದ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ತಾಲೂಕಿನ ಬೇರೆ-ಬೇರೆ ಗ್ರಾಮಗಳಿಂದ ಕಾಂಗ್ರೆಸ್ ಪಕ್ಷದ ಮುಖಂಡರು ಒಂದುಗೂಡಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟಣೆ ಹಮ್ಮಿಕೊಂಡಿದ್ದರು.
ಶಾಂತಿಸಾಗರ ವಿದ್ಯಾಪೀಠದ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಮುಖಂಡರಾದ ರವೀಂದ್ರ ಗಾಣಿಗೇರ ಮಾತನಾಡಿ, ಕೊರೋನಾ ಸಂಕಷ್ಟದ ಸಮಯದಲ್ಲಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಭೂಸುಧಾರಣಾ ಕಾಯಿದೆ ಅನಾವಶ್ಯಕವಾಗಿದ್ದು, ಅದನ್ನು ವಾಪಸ್ಸು ಪಡೆಯಬೇಕೆಂದು ಹೇಳಿ, ಉಪತಹಸೀಲ್ದಾರರಿಗೆ ಮನವಿ ಅರ್ಪಿಸಿದರು.

ಕಾಗವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಅಕಿವಾಟೆ, ಮುಖಂಡರಾದ ರಾಹುಲ್ ಶಹಾ, ಅಜೀತ ಕರವ, ಸಂಜಯ ಭಿರಡಿ, ಬಾಳಾಸಾಹೇಬ ಪಾಟೀಲ, ವಿಪುಲ ಪಾಟೀಲ, ಪವನಕುಮಾರ ಪಾಟೀಲ, ರಾಜು ಕುಸನಾಳೆ, ಬಾಹುಬಲಿ ಕುಸನಾಳೆ, ರಾಜು ದುಗ್ಗೆ, ಶ್ರೀಕಾಂತ ಪಾಟೀಲ, ಆದಿನಾಥ ದಾನೋಳ್ಳಿ, ಗುರುರಾಜ ಮಡಿವಾಳರ, ಸೇರಿದಂತೆ ಅನೇಕರು ಇದ್ದರು.

Related