ಕಾಂಗ್ರೆಸಿಗೆ ಗಂಡಾಂತರ ಬಂದಿದೆ:ದೊಡ್ಡಪ್ಪಗೌಡ ಪಾಟೀಲ

ಕಾಂಗ್ರೆಸಿಗೆ ಗಂಡಾಂತರ ಬಂದಿದೆ:ದೊಡ್ಡಪ್ಪಗೌಡ ಪಾಟೀಲ

ಯಡ್ರಾಮಿ : ಅಪಪ್ರಚಾರ ಮಾಡುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಆಗಿದೆ. ಜನರಲ್ಲಿ ಸುಳ್ಳು ಹೇಳುತ್ತ ತಿರುಗುವ ಚಾಳಿ ಕಲಿತ್ತಿದೆ ಇದಕ್ಕೆ ಜನರೇ ಉತ್ತರ ನೀಡುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯು ಚುನಾವಣೆಯ ಫಲಿತಾಂಶವೆ ಹೇಳುತ್ತಿವೆ. ದೇಶದಲ್ಲಿ ಕಾಂಗ್ರೆಸಿಗೆ ಗಂಡಾಂತರ ಬಂದಿದೆ ವಿನ: ಭಾರತಕ್ಕಲ್ಲ ಎಂದು ಯಡ್ರಾಮಿಯಲ್ಲಿ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಬಿ.ಜಿ. ಪಾಟೀಲ ಪರ ಮತಯಾಚನೆ ಸಂದರ್ಭದಲ್ಲಿ ಜೇವರ್ಗಿ ಮತಕ್ಷೆತ್ರದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳ ನುಡಿದರು.

ಗ್ರಾಮ ಪಂಚಾಯತಿಗಳಿಗೆ ವಿವಿಧ ರೀತಿಯಲ್ಲಿ ಅನುಕೂಲಗಳು ಮತ್ತು ಹೆಚ್ಚಿನ ಅನುದಾನ ಬಿಡಗಡೆ ಮಾಡಿರೋದು ನರೇಂದ್ರ ಮೊದಿಯವರ ಸರ್ಕಾರ. ಪ್ರತಿಯೊಬ್ಬ ಜನರಿಗೆ ಗ್ರಾ.ಪಂ ಮೂಲಕ ಜನರ ಮನೆ ಬಾಗಿಲಿಗೆ ಯೊಜನೆ ತಲುಪಿಸುವ ಕೆಲಸ ಬೊಮ್ಮಾಯಿ ಸರ್ಕಾರ ಮಾಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಈ ಆಟ ಜನರ ಮುಂದೆ ನಡಿಯಲ್ಲ ಎಂದರು.

ಗ್ರಾಮ ಪ್ರತಿ ಮನೆಗೆ ನೀರು ಹರಿಸಿ ಜನರ ದಾಹ ತಿರಿಸುವ ಕೆಲಸ ಮಾಡಿದೆ. ಹೊಸ ಗ್ರಾಮ ಪಂಚಾಯತಿಗೆ ಹೊಸ ಕಟ್ಟಡದ ವ್ಯವಸ್ಥೆ ಮಾಡುತ್ತಿದೆ. ಇವೆಲ್ಲ ಸರ್ಕಾರದ ಕೆಲಸವಾಗಿದೆ ಕಾಂಗ್ರೆಸ್ ಸಾಧನೆ ಏನೆಂದು ಹೇಳಬೇಕು ಎಂದರು.

ಸೂರ್ಯ ಚಂದ್ರರರು ಇರುವುದು ಎಷ್ಟು ಸತ್ಯವೊ ಅದೆ ತರಹ ಜೇವರ್ಗಿ ಮತಕ್ಷೆತ್ರದಿಂದ ಬಿ.ಜಿ, ಪಾಟೀಲ ಅವರಿಗೆ ಅಧಿಕ ಮತಗಳು ನೀಡಿ ಗೆಲ್ಲಿಸುವುದು ಅಷ್ಟೆ ಸತ್ಯ ಎಂದರು. ಗ್ರಾಮ ಪಂಚಾಯಿತಿ ಸದಸ್ಯರು ಅನಕ್ಷರಸ್ಥರು ಆಗಿದರೆ ನಿಮ್ಮ ಪರವಾಗಿ ನಿಮ್ಮ ವಿಶ್ವಾಸ ಇದ್ದ ವ್ಯಕ್ತಿ ನಿಮ್ಮ ಜೊತೆ ಮತ ಚಲಾಯಿಸಲು ಬರಬಹುದು ಆದರೆ ಅವರ ಹೆಸರು ಪಿಡಿಓ ಗಮನಕ್ಕೆ ತಂದುನೊಂದಣಿ ಮಾಡಿಸಬೇಕು ಎಂದರು.

ನಾನು ಯಾವಾಗಲೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಬರುವ ಅನುದಾನವನ್ನು ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ ಜನರಿಗೆ ಸಮರ್ಪಕವಾಗಿ ಹಂಚುತ್ತೆನೆ ಎಂದು ಕಲಬುರಗಿ ಮತ್ತು ಯಾದಗಿರಿ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಯಾಗಿರುವಾ ಬಿ.ಜಿ. ಪಾಟೀಲರು ಮಾತನಾಡಿ, ಬಿಜೆಪಿ ಪಕ್ಷ ಹೆಚ್ಚು ಗೆಲುವು ಸಾಧಿಸಿದರೆ ನಾವು ಶಾಸನಗಳು ಜಾರಿಗೆ ತರಲು ಅನುಕೂಲವಾಗುತ್ತದೆ ದಯವಿಟ್ಟು ನಿಮ್ಮ ಮತ ನನಗೆ ಕೊಡಬೇಕು ಎಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಕಲಬುರಗಿ ಸಂಸದ ಉಮೇಶ, ಜಾದವ, ಶಿವರಾಜ, ಪಾಟೀಲ ರದ್ದೇವಾಡಿ, ಅಮರನಾಥ, ಪಾಟೀಲ, ಸುನಿಲ, ವಲ್ಲಾಪುರ್, ಧರ್ಮಣ್ಣ, ದೊಡಮನಿ, ಮಲ್ಲಿನಾಥಗೌಡ, ಯಲಗೊಡ , ಶೋಭಾ, ಭಾಣಿ, ಭಿಮರಾವ, ಗುಜಗುಂಡ, ಅಶೋಕ, ಗೋಗಿ, ಧರ್ಮಣ್ಣ, ಇಟಾಗ, ರೇವಣಸಿದ್ದ, ಸಂಕಾಲಿ, ದಂಡಪ್ಪ ಸಾಹು .ಕುಳಗೇರಿ, ಆನಂದ.ಯತ್ನಾಳ, ಮಲ್ಲಿಕಾರ್ಜುನ, ಯಾದಗಿರಿ, ಎಂ.ಬಿ ಪಾಟೀಲ, ಶ್ರೀಶೈಲಗೌಡ, ಕರಕಿಹಳ್ಳಿ, ಶರಣಪ್ಪ, ತಳವಾರ, ಬಸವರಾಜ, ತಾಳಿಕೊಟಿ, ಚಂದ್ರಕಾಂತ, ಕುಸ್ತಿ, ಶೆಖರಗೌಡ, ವಡಗೇರಾ, ಚನ್ನೂ, ತಾಳಿಕೋಟೆ, ಶ್ರೀಶೈಲ, ರಾಠೊಡ, ಶಂಕರಲಿಂಗ, ಕರಕಿಹಳ್ಳಿ, ಭಗವಂತ್ರಾ, ಬೆಣ್ಣೂರ ಮತ್ತು ಸಮಸ್ತ ಯಡ್ರಾಮಿ ತಾಲ್ಲೂಕಿನ ಬಿಜೆಪಿ ಬೆಂಬಲಿತ ಗ್ರಾ.ಪಂ ಸದಸ್ಯರು, ಪಕ್ಷದ ಕಾರ್ಯಕರ್ತರು ಇನ್ನಿತರರಿದ್ದರು.

Related