ನೀರಿನಿಂದ ತಂಬಿ ಹರಿದ ಚೆಕ್‌ಡ್ಯಾಮ್

ನೀರಿನಿಂದ ತಂಬಿ ಹರಿದ ಚೆಕ್‌ಡ್ಯಾಮ್

ಮುದ್ದೇಬಿಹಾಳ : ರೈತಾಪಿ ವರ್ಗ ಇದೀಗ ಮುಂಗಾರು ಹಂಗಾಮಿನ ಬಿತ್ತನೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು ಮಳೆಯರಾಯನು ಸಾಥ್ ಕೊಡುತ್ತಿದ್ದಾನೆ. ಇದಕ್ಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ರೈತರ ಜಮೀನಿನಲ್ಲಿ ನೀರಿನ ಲಭ್ಯತೆ ದೊರೆಯಬೇಕು ಎಂಬ ಸದುದ್ದೇಶದಿಂದ ನಿರ್ಮಿಸಿರುವ ಚೆಕ್‌ಡ್ಯಾಮ್‍ ತುಂಬಿವೆ.

ತಾಲೂಕಿನ ಬಿದರಕುಂದಿ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಚೆಕ್‌ಡ್ಯಾಮ್‌ಗಳು ಒಂದೇ ಮಳೆಗೆ ತುಂಬಿವೆ. ಮುದ್ದೇಬಿಹಾಳದಿಂದ ಢವಳಗಿ ಗ್ರಾಮಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿ ನಿರ್ಮಿಸಲಾದ ಅಂದಾಜು 100 ಮೀಟರ್ ದೂರದವರೆಗೂ ನೀರು ಸಂಗ್ರಹವಾಗಿದೆ.

ಬಿದರಕುಂದಿ ಗ್ರಾಪಂ ಅಡಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಚೆಕ್ ಡ್ಯಾಮ್ ನಿರ್ಮಿಸಲಾಗಿದೆ. ಚೆಕ್ ಡ್ಯಾಮ್ ಕಟ್ಟಿದ್ದರಿಂದ ನೀರು ಸಂಗ್ರಹಗೊAಡು ಜನ, ಜಾನುವಾರುಗಳಿಗೆ ಸದಾ ನೀರು ದೊರೆಯುವಂತಾಗಿದೆ. ರೈತರು ಚೆಕ್ ಡ್ಯಾಮಗಳಲ್ಲಿ ನೀರು ತುಂಬಿದ್ದನ್ನು ಕಂಡು ಹರ್ಷಗೊಂಡಿದ್ದಾರೆ.

Related