ಚಂದ್ರಮುಖಿ-2 ಶೂಟಿಂಗ್ ಶುರುವಾಗಿದಿಯಂತೆ..

  • In Cinema
  • July 16, 2022
  • 257 Views
ಚಂದ್ರಮುಖಿ-2 ಶೂಟಿಂಗ್ ಶುರುವಾಗಿದಿಯಂತೆ..

ಚಂದ್ರಮುಖಿ ಸಿನಿಮಾದ ಸೀಕ್ವೆಲ್ ಅನೌನ್ಸ್ ಆಗಿದ್ದು, ಶೂಟಿಂಗ್ ಆರಂಭವಾಗಿದೆ. ಹೌದು, ಚಂದ್ರಮುಖಿ – 2‘ ಚಿತ್ರದ ಶೂಟಿಂಗ್ ಅಧಿಕೃತವಾಗಿ ಆರಂಭವಾಗಿದ್ದು, ಈ ಸೀಕ್ವೆಲ್ ನಲ್ಲಿ ನಾಯಕನಾಗಿ ನಟಿಸುತ್ತಿರುವ ರಾಘವ್ ಲಾರೆನ್ಸ್ ರಜನಿಕಾಂತ್ ಅವರ ಆಶೀರ್ವಾದ ಪಡೆದಿದ್ದಾರೆ.

ಸ್ಯಾಂಡಲ್​ವುಡ್​ನ ಎವರ್​ಗ್ರೀನ್​ ಸಿನಿಮಾಗಳಲ್ಲಿ ಒಂದಾದ ‘ಆಪ್ತಮಿತ್ರ’ ತಮಿಳಿನಲ್ಲಿ ‘ಚಂದ್ರಮುಖಿ’ ಹೆಸರಿನಲ್ಲಿ ರಿಲೀಸ್​ ಆಗಿತ್ತು. 2005ರಲ್ಲಿ ತೆರೆಕಂಡಿದ್ದ ಈ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಸಖತ್ ಹಿಟ್​ ಆಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್,ಜ್ಯೋತಿಕಾ, ನಯನತಾರಾ ನಟಿಸಿದ್ದ ‘ಚಂದ್ರಮುಖಿ’ ಸಿನಿಮಾ ಹೊಸ ಸಂಚಲನವನ್ನೇ ಮೂಡಿಸಿತ್ತು.  ಇತ್ತೀಚೆಗಷ್ಟೇ ಈ ಸಿನಿಮಾ ರಿಲೀಸ್ ಆಗಿ 17 ವರ್ಷ ಪೂರೈಸಿದೆ.

ಇದರ ಬೆನ್ನಲ್ಲೇ ಇದೀಗ ಈ ಸಿನಿಮಾದ ಸೀಕ್ವೆಲ್ ಅನೌನ್ಸ್ ಆಗಿದ್ದು, ಶೂಟಿಂಗ್ ಆರಂಭವಾಗಿದೆ. ಹೌದು, ಚಂದ್ರಮುಖಿ 2‘ಚಿತ್ರದ ಶೂಟಿಂಗ್ ಅಧಿಕೃತವಾಗಿ ಆರಂಭವಾಗಿದ್ದು, ಈ ಸೀಕ್ವೆಲ್ ನಲ್ಲಿ ನಾಯಕನಾಗಿ ನಟಿಸುತ್ತಿರುವ ರಾಘವ್ ಲಾರೆನ್ಸ್ ತಲೈವಾ ರಜನಿಕಾಂತ್ ಅವರ ಆಶೀರ್ವಾದ ಪಡೆದಿದ್ದಾರೆ.

Related