ಬ್ರಿಟನ್ ಯಾತ್ರಾರ್ಥಿ ಮೇಲೆ ನಿಗಾ: ಜಿಲ್ಲಾಧಿಕಾರಿ

ಬ್ರಿಟನ್ ಯಾತ್ರಾರ್ಥಿ ಮೇಲೆ ನಿಗಾ: ಜಿಲ್ಲಾಧಿಕಾರಿ

ಬೀದರ್ : ಬ್ರಿಟನ್‌ದಿಂದ ಬೀದರ್ ನಗರಕ್ಕೆ ಆಗಮಿಸಿರುವ ಯಾತ್ರಿಯ ಸಂಪರ್ಕಕ್ಕೆ ಬಂದ ಯಾತ್ರಾರ್ಥಿಯ ಒಂದು ವರ್ಷದ ಪುತ್ರಿ ಸೇರಿದಂತೆ ಎಲ್ಲ ವ್ಯಕ್ತಿಗಳ ಆರೋಗ್ಯ ಮೇಲೆ ತೀವ್ರ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ತಿಳಿಸಿದರು.

ಯಾತ್ರಾರ್ಥಿಯ ಪ್ರಥಮ 8 ಜನ ಸಂಪರ್ಕಿತರನ್ನು ಮತ್ತು ದ್ವಿತೀಯ 10 ಜನ ಸಂಪರ್ಕಿತರೆಲ್ಲರೂ ಯಾವುದೇ ರೋಗ ಲಕ್ಷಣಗಳು ಇಲ್ಲದೇ ಇರುವುದರಿಂದ ಎಲ್ಲರಿಗೂ ಮನೆಯಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದರು.

ಈ ಮಾಹಿತಿ ತಿಳಿಯುತ್ತಿದ್ದಂತೆ ಯಾತ್ರಾರ್ಥಿಯ ಪ್ರಥಮ 8ಜನ ಸಂಪರ್ಕಿತರನ್ನು ಮತ್ತು ದ್ವಿತೀಯ 10 ಜನ ಸಂಪರ್ಕಿತರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಡಿ. 23ರಂದು ಬೆಳಗ್ಗೆ ಪತ್ತೆ ಹಚ್ಚಿದ್ದು, ಬೆಳಗ್ಗೆ 10 ಕ್ಕೆ ಎಲ್ಲರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Related