ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ, ಕಣ್ಣೀರಿಟ್ಟ ಅಭಿಮಾನಿಗಳು

ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ, ಕಣ್ಣೀರಿಟ್ಟ ಅಭಿಮಾನಿಗಳು

ಮುಂಬೈ: ಅಮೋಘ ಅಭಿನಯದಿಂದ ಜನರ ಮನಸ್ಸಲ್ಲಿ ಸ್ಥಾನ ಪಡೆದಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಇಂದು ಇಹಲೋಕ ತ್ಯಜಿಸಿದ್ದಾರೆ.

ನ್ಯೂರೋ ಎಂಡೊಕ್ರೈನ್ ಟ್ಯೂಮರ್ ಎಂಬ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಇರ್ಫಾನ್(53) ಬುಧವಾರ ಬೆಳಿಗ್ಗೆ ಮುಂಬೈ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ಇವರು ಸಾವಿನಲ್ಲೂ ತಾಯಿಯನ್ನು ಹಿಂಬಾಲಿಸಿದ್ದಾರೆ. ಇವರ ಸಾವಿಗೆ ಇಡೀ ಬಾಲಿವುಡ್ ಅಂಗಳವೇ ದುಃಖದ ಮಡುವಲ್ಲಿ ಮುಳುಗಿದೆ.

ಮೂಲತಃ ರಾಜಸ್ಥಾನದವರಾದ ಇರ್ಫಾನ್ ಅವರ ಉತ್ತಮ ನಟನೆಗೆ ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, ಫಿಲ್ಮ್‍ಫೇರ್ ಪ್ರಶಸ್ತಿ ದೊರೆತಿದೆ.

ಇರ್ಫಾನ್ ಅಭಿನಯದ ಸಿನಿಮಾಗಳು:

‘ಲಂಚ್ ಬಾಕ್ಸ್’, ‘ಗುಂಡೇ’, ‘ಜುರಾಸಿಕ್ ವರ್ಲ್ಡ್’, ‘ತಲ್ವಾರ್’, ‘ಬಿಲ್ಲು’, ‘ತುಳಸಿ’, ‘ದಿ ಕಿಲ್ಲರ್’, ‘ಪುರುಷ್’, ‘ಪಿತಾ’, ‘ಹಿಂದಿ ಮೀಡಿಯಂ’, ‘ದಿ ಜಂಗಲ್ ಬುಕ್’, ‘ಹೈದರ್’, ‘ಸಂಡೇ’, ‘ರೋಗ್’, ‘ದಿ ವಾರಿಯರ್’ ಮುಂತಾದ ಹಲವು ಸಿನಿಮಾಗಳಲ್ಲಿ ಇರ್ಫಾನ್ ಖಾನ್ ನಟಿಸಿದ್ದರು.

Related