BBMP: 12 ವಾರ್ಡ್‌ ಹೆಸರು ಬದಲಾವಣೆ

BBMP: 12 ವಾರ್ಡ್‌ ಹೆಸರು ಬದಲಾವಣೆ

ಬೆಂಗಳೂರು; ರಾಜ್ಯ ಸರ್ಕಾರವು ಬಿಬಿಎಂಪಿಯ 225 ವಾರ್ಡ್‌ಗಳ ಮರುವಿಂಗಡಣೆ ಕರಡು ಪಟ್ಟಿಯಲ್ಲಿ 12 ವಾರ್ಡ್‌ಗಳ ಹೆಸರು ಬದಲಾವಣೆ ಮಾಡಲಾಗಿದೆ.

ಹೆಸರು ಬದಲಾವಣೆಯಿಂದ ಕೆಲವು ವಾರ್ಡ್‌ನ ಹೆಗ್ಗುರುತುಗಳಿಗೂ ಕುತ್ತು ಎದುರಾಗಿದೆ. ವಾರ್ಡ್‌ ಸಂಖ್ಯೆ 196 ಹನುಮಂತನಗರವು ಗವಿಗಂಗಾಧರೇಶ್ವರ ವಾರ್ಡ್‌ ಆಗಿ, ಬಸವನಗುಡಿ ವಾರ್ಡ್‌ ದೊಡ್ಡಗಣಪತಿ ವಾರ್ಡ್‌ ಆಗಿಯೂ ಬದಲಾವಣೆ ಕಂಡಿವೆ. ಕೆಲವು ವಾರ್ಡ್‌ಗಳ ಗಡಿಯಲ್ಲಿ ಕೊಂಚ ಬದಲಾವಣೆ ತರಲಾಗಿದೆ. ವಾರ್ಡ್‌ ಸಂಖ್ಯೆಯಲ್ಲೂ ಹಲವು ಬದಲಾವಣೆ ಮಾಡಿ ಪಟ್ಟಿ ಪ್ರಕಟಿಸಲಾಗಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚಿಸಿದ್ದ 243 ವಾರ್ಡ್‌ಗಳನ್ನು ಹೈಕೋರ್ಟ್‌ ಸೂಚನೆಯ ಮೇರೆಗೆ ಈಗಿನ ಕಾಂಗ್ರೆಸ್‌ ಸರ್ಕಾರವು 225 ವಾರ್ಡ್‌ಗಳಿಗೆ ಇಳಿಸಿ ಆಗಸ್ಟ್‌ನಲ್ಲಿ ಕರಡು ಅಧಿಸೂಚನೆ ಪ್ರಕಟಿಸಿತ್ತು. ಈ ಕರಡು ಅಧಿಸೂಚನೆಗೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಆಧರಿಸಿ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ.

Related