ಸಾಮಾನ್ಯ ಜನರಂತೆ ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ ಅಮೂಲ್ಯ

ಸಾಮಾನ್ಯ ಜನರಂತೆ ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ ಅಮೂಲ್ಯ

ಬೆಂಗಳೂರು: ಇಂದು ಕರ್ನಾಟಕ ರಾಜ್ಯದಲ್ಲಿ ಮೊದಲನೇ ಹಂತದ14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ07 ಗಂಟೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಇನ್ನು ಕನ್ನಡ ಚಿತ್ರರಂಗದ ನಟಿ ಅಮೂಲ್ಯ ಅವರು ಅವರ ಪತಿಯ ಜೊತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಅಮೂಲ್ಯವಾದ ಮತ ಚಲಾಯಿಸಿದ್ದಾರೆ.

ಬೆಂಗಳೂರಿನ ಬಿಇಟಿ ಕಾನ್ವೆಂಟ್​ನಲ್ಲಿ ಜನಸಾಮಾನ್ಯರಂತೆ ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಅಮೂಲ್ಯ ಅವರು ಜನರ ಬಳಿ ಮತ ಹಾಕಿ, ತಮ್ಮ ಹಕ್ಕು ಚಲಾಯಿಸುವಂತೆ ಕೋರಿಕೊಂಡಿದ್ದಾರೆ. ಅಮೂಲ್ಯ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಮಗು ಜನಿಸಿದ ಬಳಿಕ ಅವರು ನಟನೆಯಿಂದ ದೂರವೇ ಉಳಿದರು.

Related