ಬ್ರಿಟನ್‌ನಿಂದ ಯಾದಗಿರಿಗೆ ಓರ್ವ ಮಹಿಳೆ ಎಂಟ್ರಿ

ಬ್ರಿಟನ್‌ನಿಂದ ಯಾದಗಿರಿಗೆ ಓರ್ವ ಮಹಿಳೆ ಎಂಟ್ರಿ

ಯಾದಗಿರಿ : ಯಾದಗಿರಿ ಜಿಲ್ಲೆಗೆ ಈಗ ಬ್ರಿಟನ್ ಲೇಡಿ ಆತಂಕ ಎದುರಾಗಿದೆ. ಬ್ರಿಟನ್‌ನಿಂದ ಜಿಲ್ಲೆಗೆ 34 ವರ್ಷದ ಮಹಿಳೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪರಿಣಾಮ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಎಚ್ಚರಿಕೆ ವಹಿಸಿದ್ದಾರೆ.

ಬ್ರಿಟನ್ ದೇಶದಿಂದ ಮಹಿಳೆ ಬಂದ ಖಚಿತ ಮಾಹಿತಿ ಪಡೆದುಕೊಂಡ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಮಹಿಳೆಯನ್ನು ಶೀಘ್ರವಾಗಿ ಟ್ರ‍್ಯಾಕ್ ಮಾಡಿದೆ. ಮಹಿಳೆ ಬ್ರಿಟನ್ ನಿಂದ ಭಾರತಕ್ಕೆ ಬರುವಾಗ ಚೆಕ್ ಮಾಡಿಸಿ ಟೆಸ್ಟಿಂಗ್ನಲ್ಲಿ ರಿಪೋರ್ಟ್ ನೆಗೆಟಿವ್ ಬಂದಿದೆ.

ವಿದೇಶದಿಂದ ಬಂದವರ ಮೇಲೆ ಕಣ್ಗಾವಲು ಕೋವಿಡ್ ಎರಡನೇ ತಳಿ ಆತಂಕ ಹಿನ್ನಲೆ ಯಾದಗಿರಿಯಲ್ಲಿ ಕೋವಿಡ್‌ಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಕೊವೀಡ್ ಟೆಸ್ಟ್ ನಡೆಸುತ್ತಿದ್ದಾರೆ. ಆದರೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಡಿಮೆ ಬೆಳಕಿಗೆ ಬರುತ್ತಿರುವದು ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಈಗ ಬ್ರಿಟನ್‌ನಿಂದ ಕೊರೋನಾ ಆತಂಕ ಎದುರಾಗಿದ್ದು, ಈಗಾಗಲೇ ಕೊವೀಡ್ ನಿಯಮ ಪಾಲನೆ ಮಾಡಲು ಸರ್ಕಾರ ಸೂಚನೆ ನೀಡಿದೆ.

Related