ಚೀನಾದಲ್ಲಿ ಹೊಸ ಸಂಕ್ರಾಮಿಕ ರೋಗ; ರಾಜ್ಯ ಸರ್ಕಾರ ಹೈ ಅಲರ್ಟ್

ಚೀನಾದಲ್ಲಿ ಹೊಸ ಸಂಕ್ರಾಮಿಕ ರೋಗ; ರಾಜ್ಯ ಸರ್ಕಾರ ಹೈ ಅಲರ್ಟ್

ಬೆಂಗಳೂರು: ಕಳೆದ ಮೂರು ವರ್ಷಗಳ ಹಿಂದೆ ಕೊರೋನಾ ಎಂಬ ಸಾಂಕ್ರಾಮಿಕ ರೋಗ ಇಡಿ ವಿಶ್ವದಾದ್ಯಂತ ಹರಡಿ, ಇಡೀ ಜಗತ್ತನ್ನೇ ತಲನಗೊಳಿಸಿತ್ತು.

ಹೌದು ಕೊರೋನಾ ಎಂಬ ಸಾಂಕ್ರಾಮಿಕ ರೋಗವು, ಚೀನಾ ದೇಶದಿಂದ ಇಡೀ ವಿಶ್ವಕ್ಕೆ ಹರಡಿತ್ತು ಆದರೆ ಈಗ ಮತ್ತೊಂದು ಕರೋನ ರೀತಿಯ ಸಾಂಕ್ರಾಮಿಕ ರೋಗ ಚೀನಾ ದೇಶದಿಂದ ಪತ್ತೆಯಾಗಿದೆ.

ಚೀನಾ ದೇಶದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಯ ಸನ್ನದ್ಧತೆಯ ಕ್ರಮಗಳನ್ನು ತಕ್ಷಣವೇ ಪರಿಶೀಲಿಸುವಂತೆ ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದ ನಂತರ ರಾಜ್ಯ ಆರೋಗ್ಯ ಇಲಾಖೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್ ಅವರು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.

 

Related