ಇಸ್ರೋ ಸಂಸ್ಥೆಯಿಂದ ಮತ್ತೊಂದು ಮಹತ್ವದ ಹೆಜ್ಜೆ ಇಡಲು ನಿರ್ಧಾರ

ಇಸ್ರೋ ಸಂಸ್ಥೆಯಿಂದ ಮತ್ತೊಂದು ಮಹತ್ವದ ಹೆಜ್ಜೆ ಇಡಲು ನಿರ್ಧಾರ

ಬೆಂಗಳೂರು: ಇಸ್ರೋ ಸಂಸ್ಥೆಯು ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು, ಇದೇ ಫೆಬ್ರವರಿ 17ರಂದು ಸಂಜೆ 5:30ಕ್ಕೆ ಇಸ್ರೋ ಸಂಸ್ಥೆಯಿಂದ ಜಿಎಸ್ಎಲ್ ವಿ-ಎಫ್14/ ಇನ್ಸಾಟ್-3ಡಿಎಸ್ ಮಿಷನ್ ಅನ್ನು ಉಡಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಇಸ್ರೋ ಸಂಸ್ಥೆಯು ತನ್ನ ಎಕ್ಸ್ ಖಾತೆಯಲ್ಲಿ ಸುದ್ದಿಯನ್ನು ಪ್ರಕಟಿಸಿದೆ.

ಹವಾಮಾನ ಮತ್ತು ವಿಪತ್ತು ಎಚ್ಚರಿಕೆ ಮಾಹಿತಿ ನೀಡುವ ಉಪಗ್ರಹವನ್ನು ಈಗಾಗಲೇ ಜಿಯೋಸಿಂಕ್ರೊನಸ್ ಟ್ರಾನ್ಸ್ಫರ್ ಆರ್ಬಿಟ್(ಜಿಟಿಒ) ನಲ್ಲಿ ನಿಯೋಜಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

ಈ ಉಪಗ್ರಹದ ಪ್ರಾಥಮಿಕ ಉದ್ದೇಶವು ಭೂಮಿಯ ಮೇಲ್ಮೈಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಹವಾಮಾನ ಪ್ರಾಮುಖ್ಯತೆಯನ್ನು ಹೊಂದಿರುವ ವಿವಿಧ ಸ್ಪೆಕ್ಟ್ರಲ್ ಚಾನಲ್‌ಗಳಲ್ಲಿ ಸಾಗರ ವೀಕ್ಷಣೆಗಳು ಮತ್ತು ವಾತಾವರಣದ ವಿವಿಧ ಹವಾಮಾನ ನಿಯತಾಂಕಗಳ ವಿವರಗಳನ್ನು ಸಹ ಒದಗಿಸುತ್ತದೆ. ಅಲ್ಲದೆ ರಕ್ಷಣಾ ಕಾರ್ಯಾಚರಣೆಗೆ ಸಹ ಸಹಾಯ ಮಾಡುತ್ತದೆ ಎಂದು ಇಸ್ರೋ ಸಂಶೋಧಕರು ಹೇಳಿದ್ದಾರೆ.

 

Related