ಅನೈತಿಕ ತಾಣವಾಗಿ ಮಾರ್ಪಟ್ಟ ಬಸ್ ನಿಲ್ದಾಣ

ಅನೈತಿಕ ತಾಣವಾಗಿ ಮಾರ್ಪಟ್ಟ ಬಸ್ ನಿಲ್ದಾಣ

ಚಿಂಚೋಳಿ: ತಾಲ್ಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಿ ವರ್ಷಗಳು ಕಳೆದು ಹೋದರೂ ಕೂಡ ಇಲ್ಲಿಯವರೆಗೆ ಉದ್ಘಾಟನೆ ಮಾಡದೆ ಅನ್ಯೆತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ,
ಬೀದರಿನ ಕೇಂದ್ರ ಸಚಿವರು ಭಗವಂತ ಖೂಬಾ ಅವರಿಗೆ ಸ್ಥಳೀಯ ಗ್ರಾಮಸ್ಥರೆಲ್ಲ ಸೇರಿ ಶೀಘ್ರದಲ್ಲಿಯೇ ಬಸ್ ನಿಲ್ದಾಣ ಪ್ರಾರಂಭ ಮಾಡಬೇಕೆಂದು ಕೇಳಿದಾಗ, ಕೆಲವೇ ತಿಂಗಳಲ್ಲಿ ಪ್ರಾರಂಭ ಮಾಡುವುದಾಗಿ ಗ್ರಾಮಸ್ಥರಲ್ಲಿ ಹೇಳಿದರು. ಈಗ ವರ್ಷಗಳು ಕಳೆದು ಹೋದರೂ ಕೂಡ ಈ ಬಸ್ ನಿಲ್ದಾಣ ಪ್ರಾರಂಭವಾಗಿಲ್ಲ.
ತಾಲ್ಲೂಕಿನ ಶಾಸಕ ಡಾ. ಅವಿನಾಶ್ ಜಾಧವ್ ಕೂಡ ಈ ಕಡೆ ಗಮನ ಹರಿಸುತ್ತಿಲ್ಲ, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇರದೆ ಇರುವುದು ಕಾಣುತ್ತಿದ್ದು, ಲಕ್ಷಾಂತರ ರೂ ಸರ್ಕಾರದ ಅನುದಾನದಲ್ಲಿ ಬಸ್‍ನಿಲ್ದಾಣ ಮಾಡಿದ್ದು. ಕೆಲಸಕ್ಕೆ ಬಾರದಂತಾಗಿದೆ, ಜೂಜಾಟ ಅನೈತಿಕ ತಾಣವಾಗಿದೆ ತುಂಬಾ ಬೇಸರದ ವಿಷಯ. ಕೂಡಲೇ ಇದಕ್ಕೆ ಸ್ಥಳೀಯ ಶಾಸಕರು ಮತ್ತು ಸಂಸದರು, ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಚಿಮ್ಮನಚೋಡ್ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮದ ಜನರಿಗೆ ತೊಂದರೆ ಯಾಗದಂತೆ ಕೂಡಲೇ ಬಸ್ ನಿಲ್ದಾಣ ಪ್ರಾರಂಭ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನ ಗಳಲ್ಲಿ ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಗಳು ಮತ್ತು ರಾಜಕೀಯ ಜನ ಪ್ರತಿನಿಧಿಗಳ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Related