6 ಮಕ್ಕಳಿಗೆ ಜನ್ಮ ನೀಡಿದ ತಾಯಿ

  • In State
  • March 1, 2020
  • 244 Views
6 ಮಕ್ಕಳಿಗೆ ಜನ್ಮ ನೀಡಿದ ತಾಯಿ

ಭೋಪಾಲ್, ಮಾ. 01 : 23 ವರ್ಷದ ಮಹಿಳೆ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಧ್ಯಪ್ರದೇಶದ ಶಿಯೋಪುರದ ಆಸ್ಪತ್ರೆಯಲ್ಲಿ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದು, ಕಡಿಮೆ ತೂಕವಿದ್ದ ಕಾರಣ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಸಿವಿಲ್ ಸರ್ಜನ್ ಡಾ.ಆರ್.ಬಿ.ಗೋಯಲ್, ಬಡೋದ್ ನಿವಾಸಿ ಮೂರ್ತಿ ಮಾಲಿ ಎಂಬವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಇದು ಮೊದಲ ಹೆರಿಗೆಯಾಗಿದ್ದು, ಗರ್ಭ ಧರಿಸಿದ ಏಳನೇ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಕ್ಕಳ ತೂಕ ಕಡಿಮೆ ತೂಕ ಹೊಂದಿದ್ದವು ಎಂದು ತಿಳಿಸಿದ್ದಾರೆ. ಆರರಲ್ಲಿ ಎರಡು ಹೆಣ್ಣು ಮಕ್ಕಳು ಸಾವನ್ನಪ್ಪಿವೆ. ಇನ್ನುಳಿದ ನಾಲ್ಕು ಮಕ್ಕಳು 390 ರಿಂದ 450 ಗ್ರಾಂ ತೂಕ ಹೊಂದಿವೆ ನವಜಾತ ಶಿಶುಗಳನ್ನು ತೀವ್ರನಿಗಾಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Related