ಬರೋಬ್ಬರಿ 5.30 ಕೋಟಿ ರೂ. ವಶಕ್ಕೆ

ಬರೋಬ್ಬರಿ 5.30 ಕೋಟಿ ರೂ. ವಶಕ್ಕೆ

ರಾಮನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಹಳ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿದ್ದು ವಾಹನ ತಪಾಸನೆ ವೇಳೆ ಸುಮಾರು 5.30 ಕೋಟಿ ನಗದು ಪತ್ತೆಯಾಗಿದೆ.

ಅಕ್ರಮವಾಗಿ ಯಾವುದೇ ದಾಖಲೆ ಇಲ್ಲದೆ ಸುಮಾರು 5.30 ಕೋಟಿ ನಗರದನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಹೆಜ್ಜಾಲ ಬಳಿಯ ಕಣಮಿಣಕೆ‌ ಟೋಲ್ ಬಳಿ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 5.30 ಕೋಟಿ ರೂ. ನಗದು ಹಣವನ್ನ ವಶಕ್ಕೆ ಪಡೆಯಲಾಗಿದೆ. ಲೋಕಸಭಾ ಚುನಾವಣೆ ಹಿನ್ನಲೆ ಯಾವುದೇ ಅಕ್ರಮ ನಡೆಯದಂತೆ ಕ್ರಮ ಕೈಗೊಂಡಿರುವ ಚುನಾವಣಾಧಿಕಾರಿಗಳು, ಪ್ರತಿಯೊಂದು ವಾಹನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅದರಂತೆ ಇಂದು(ಮಾ.22) ತಪಾಸಣೆ ವೇಳೆ ಕಂತೆ ಕಂತೆ‌ ನೋಟು ಪತ್ತೆಯಾಗಿದ್ದು, ಬ್ಯಾಂಕಿಗೆ ಸೇರಿರುವ ಹಣ ಎಂದು ವಾಹನ ಮಾಲೀಕರು ಹೇಳುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಬ್ಯಾಂಕ್ ದಾಖಲೆ ಕೇಳಿರುವ ಬಿಡದಿ ಪೊಲಿಸರು, ಸಮರ್ಪಕ ದಾಖಲೆಗಾಗಿ ಕಾಯುತಿದ್ದಾರೆ ಎಂದು ತಿಳಿದು ಬಂದಿದೆ.

 

Related