ಅಪರಿಚಿತ ವ್ಯಕ್ತಿಯ ಶವ ಪತ್ತೆ

ಅಪರಿಚಿತ ವ್ಯಕ್ತಿಯ ಶವ ಪತ್ತೆ

ಮುಂಡಗೋಡ: ತಾಲೂಕಿನ ಕಾತೂರ-ನಾಗನೂರ ರಸ್ತೆಯ ಅಂಚಿನ ಅರಣ್ಯ ಪ್ರದೇಶದ ಬಡಗಿ ಹಳ್ಳದಲ್ಲಿ ಬಾನುವಾರ ಸಂಜೆ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.
ಶವದ ಬಹು ಬಾsಗವನ್ನು ಪ್ರಾಣಿಗಳು ತಿಂದು ಹಾಕಿದ್ದು, ತೊಡೆ ಮತ್ತು ಕಾಲು ಸೇರಿದಂತೆ ಕೆಲವೇ ಭಾಗ ಮಾತ್ರ ಪತ್ತೆಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಈ ಶವ ಕಾಣಿಸಿಕೊಂಡಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಮುಂಡಗೋಡ ಪಿ.ಎಸ್.ಐ ಬಸವರಾಜ ಮಬನೂರ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related