ಮುಬೈ: ಬಾಲಿವುಡ್ ನ ಹಿರಿಯ ನಟಿ ಶ್ರೀದೇವಿಯವರು ಹಲವಾರು ಭಾಷೆಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದವರು.
ಇನ್ನು ಶ್ರೀದೇವಿಯವರ ಪ್ರೀತಿಯ ಮಗಳು ಜಾನ್ವಿ ಕಪೂರ್ ಅವರು ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲ ಸಿನಿಮಾ ‘ಧಡಕ್’ ದಲ್ಲಿ ಅವರು ಸೂಪರ್ ಹಿಟ್ ಆದರೂ ನಂತರ ಕೆಲವು ಸಿನಿಮಾಗಳು ಅವರ ಕೈ ಹಿಡಿಯಲಿಲ್ಲ ಆದ ಕಾರಣ ಇದೀಗ ಶ್ರೀದೇವಿಯವರ ನಟಿಸಿರುವ ‘ಚಾಲ್ಬಾಜ್ ಚಿತ್ರವನ್ನು ರಿಮೇಕ್ ಮಾಡಲಿದ್ದು ಇದರಲ್ಲಿ ಜಾನ್ವಿ ಕಪೂರ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಯೆಸ್… ಜಾನ್ವಿ ಕಪೂರ್ ತಾಯಿ ಶ್ರೀದೇವಿ ನಟಿಸಿದ್ದ ಸೂಪರ್ ಹಿಟ್ ಸಿನಿಮಾವೊಂದರ ರಿಮೇಕ್ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 1989 ರಲ್ಲಿ ಬಿಡುಗಡೆಯಾದ ‘ಚಾಲ್ಬಾಜ್’ ಚಿತ್ರ ಶ್ರೀದೇವಿ ಅವರ ಪ್ರಮುಖ ಪಾತ್ರದಲ್ಲಿ ಮೂಡಿಬಂದಿತ್ತು. ಇದನ್ನೂ ಓದಿ: ನಟಿ ರನ್ಯಾ ರಾವ್ಗೆ ಬರೋಬ್ಬರಿ 102.55 ಕೋಟಿ ದಂಡ
ಈ ಚಿತ್ರ, ಸಿನಿಮಾ ಜಗತ್ತಿನಲ್ಲಿ ಭಾರಿ ಸದ್ದು ಮಾಡಿತ್ತು. ಈಗ ಈ ಸಿನಿಮಾವನ್ನು ರಿಮೇಕ್ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.’ಚಾಲ್ಬಾಜ್’ ರಿಮೇಕ್ನಲ್ಲಿ ಶ್ರೀದೇವಿ ಪಾತ್ರದಲ್ಲಿ ಜಾನ್ವಿ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ರಿಮೇಕ್ನಲ್ಲಿ ಜಾನ್ವಿ ಡಬಲ್ ರೋಲ್ ಮಾಡಬೇಕಾಗುತ್ತದೆ. ಈ ಯೋಜನೆಯ ನಿರ್ದೇಶಕರು ಯಾರು? ರಿಮೇಕ್ ಕಥೆಯಲ್ಲಿ ಯಾವ ಬದಲಾವಣೆಗಳಿವೆ? ಎಂಬುದರ ಬಗ್ಗೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
