ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ದಿನಗಳನ್ನೇ ಪ್ರಾರಂಭವಾಗಿದ್ದು, ದಸರಾ ಹಬ್ಬಕ್ಕೆ ಎಲ್ಲ ರೀತಿಯ ಭರ್ಜರಿ ಸಿದ್ಧತೆ ನಡೆಯುತ್ತಿದೆ. ದಸರಾ ಹಬ್ಬಕ್ಕೆ ಮೆರುಗುಗೊಳಿಸಲು ಗಜ ಪಡೆಗಳು ಗಾಂಭೀರ್ಯವಾಗಿ ಹೆಜ್ಜೆ ಹಾಕಲು ಈಗಾಗಲೇ ತಾಲಿಮು ನಡಿಸಲಾಗುತ್ತಿದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತವಾಗಿ ಮೈಸೂರು ದಸರಾಗೆ ಆಹ್ವಾನ ನೀಡಲಾಗಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಮೈಸೂರು ಜಿಲ್ಲಾಡಳಿತ ಇಂದು (ಗುರುವಾರ ಸೆ. 04) ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಡ ಹಬ್ಬ ದಸರಾದ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು. ಇದನ್ನೂ ಓದಿ: GBA ನಾಮಫಲಕ ಅನಾವರಣ
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಉಪಸ್ಥಿತರಿದ್ದರು.
