ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಜೈಲು ಸೇರಿವಾಸ ಅನುಭವಿಸುತ್ತಿರುವ ರನ್ಯಾ ರಾವ್ಗೆ ಇದೀಗ ಬಿಗ್ ಶಾಕ್ ಎದುರಾಗಿದೆ.
ಹೌದು ರನ್ಯಾ ರಾವ್ ಚಿನ್ನ ಕಳ್ಳ ಸಾಗಾಣಿಕೆ ಮಾಡಿರೋದು ದೃಢಪಟ್ಟಿರುವುದರಿಂದ ಇದೀಗ ಡಿಆರ್ ಐ ಅಧಿಕಾರಿಗಳು ಬರೋಬ್ಬರಿ 102.55 ಕೋಟಿ ರೂಪಾಯಿ ದಂಡ ವಿಧಿಸಿದೆ. ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ಅವರು ವಿದೇಶದಿಂದ ಅಕ್ರಮವಾಗಿ ಭಾರತಕ್ಕೆ ತಂದಿದ್ದರು. ಇದರ ತನಿಖೆ ನಡೆದಿದ್ದು ರನ್ಯಾ ರಾವ್ಗೆ ಡಿಆರ್ಐ ಶಾಕ್ ಕೊಟ್ಟಿದೆ. ಬರೋಬ್ಬರಿ 102.55 ಕೋಟಿ ರೂ. ದಂಡ ಪಾವತಿಸುವಂತೆ ಡಿಆರ್ಐ ನೋಟಿಸ್ ನೀಡಿದೆ.
ಡಿಆರ್ಐ ಅಧಿಕಾರಿಗಳು ಅಡ್ ಜುಡಿಕೇಷನ್ ಮಾಡಿ ನೋಟಿಸ್ ನೀಡಿದ್ದಾರೆ. ಮಾರ್ಚ್ 4ರಂದು ಗೋಲ್ಡ್ ಸೀಜ್ ಮಾಡಿ ರನ್ಯಾ ರಾವ್ ಅವರನ್ನು ಡಿಆರ್ಐ ಬಂಧಿಸಿತ್ತು. ಕಳ್ಳಸಾಗಣೆ ವಸ್ತುಗಳನ್ನು 6 ತಿಂಗಳಲ್ಲಿ ಡಿಆರ್ಐ ಅಧಿಕಾರಿಗಳು ವಸೂಲಿ ಮಾಡಬೇಕಿದೆ. ರನ್ಯಾ ರಾವ್ ಅವರು ಅಕ್ರಮವಾಗಿ 127.3 ಕೆಜಿ ಚಿನ್ನ ಸಾಗಾಟ ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ. ಇದನ್ನೂ ಓದಿ: ಎಸ್ಸಿ, ಎಸ್ಟಿ ಜಾಗೃತಿ ಸಭೆಗಳಿಗೆ ಪೊಲೀಸ್ ಅಧಿಕಾರಿಗಳು ಕಡ್ಡಾಯ ಹಾಜರಾಗುವಂತೆ ಡಿಜಿಪಿಗೆ ಪತ್ರ
102.55 ಕೋಟಿ ರೂ. ದಂಡ ಪಾವತಿಸುವಂತೆ DRIನಿಂದ ನೋಟಿಸ್ ಜಾರಿ ಆಗಿದೆ. ಇಂದು (ಮಂಗಳವಾರ ಸೆ. 2) ಜೈಲಿಗೆ ತೆರಳಿ ರನ್ಯಾ ಸೇರಿ ನಾಲ್ವರೂ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ದಂಡ ಪಾವತಿ ಮಾಡದಿದ್ದರೆ ಆಸ್ತಿ ಮುಟ್ಟುಗೋಲು ಹಾಕಲು ಅವಕಾಶವಿದೆ.
