ಐಪಿಎಲ್; ಯಾರಿಗೆ ಒಲಿಯಲಿದೆ ಇಂದಿನ ಗೆಲುವು

ಐಪಿಎಲ್; ಯಾರಿಗೆ ಒಲಿಯಲಿದೆ ಇಂದಿನ ಗೆಲುವು

ದೆಹಲಿ: ಇಂದು ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಈ ತಂಡದಲ್ಲಿ ಯಾರು ಗೆದ್ದು ಪ್ಲೇಆಫ್ ಗೆ ಸೇರುತ್ತಾರೆ ಎಂಬ ಕುತೂಹಲ ಎಲ್ಲಾ ಐಪಿಎಲ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಹೌದು, ಇಂದು ನಡೆಯಲಿರುವ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಎರಡೂ ತಂಡಗಳು ಪ್ಲೇಆಫ್ ರೇಸ್​ನಲ್ಲಿದೆ. ಹೀಗಾಗಿ ಉಭಯ ತಂಡಗಳ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಇದಾಗಿದ.

ಇನ್ನು ಮತ್ತೊಂದೆಡೆ ಈ ಪಂದ್ಯದ ಫಲಿತಾಂಶ ಆರ್​ಸಿಬಿ ತಂಡದ ಪ್ಲೇಆಫ್ ಹಾದಿಯನ್ನು ಕೂಡ ನಿರ್ಧರಿಸಲಿದೆ. ಅಂದರೆ ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬುದರ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಹಾದಿ ಸುಗಮವಾಗಲಿದೆ.

ಅದರಂತೆ ಆರ್​ಸಿಬಿ ಪಾಲಿಗೆ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲ್ಲುವುದು ಉತ್ತಮ. ಏಕೆಂದರೆ 12 ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು -0.482 ನೆಟ್ ರನ್ ರೇಟ್ ಹೊಂದಿದೆ. ಇನ್ನು ಆರ್​ಸಿಬಿ (+0.387) ತಂಡವನ್ನು ನೆಟ್ ರನ್​ ರೇಟ್​ನಲ್ಲಿ ಹಿಂದಿಕ್ಕಲು ಡೆಲ್ಲಿ ಕ್ಯಾಪಿಟಲ್ಸ್​ ಏನಿಲ್ಲಾ ಅಂದರೂ ಕನಿಷ್ಠ 100 ಕ್ಕಿಂತ ಹೆಚ್ಚಿನ ರನ್​ಗಳ ಅಂತರದಿಂದ ಗೆಲ್ಲಬೇಕು. ಅಂತಹ ಅಮೋಘ ಗೆಲುವು ಸಾಧಿಸಿದರೆ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ​ಆರ್​ಸಿಬಿಯನ್ನು ನೆಟ್ ರನ್​ ರೇಟ್​ನಲ್ಲಿ ಹಿಂದಿಕ್ಕಲು ಸಾಧ್ಯ.

 

Related