ಸಿಲಿಕಾನ್ ಸಿಟಿಯಲ್ಲಿ ಮತ್ತೆ ನೀರಿನ ಆಹಾಕಾರ..!

ಸಿಲಿಕಾನ್ ಸಿಟಿಯಲ್ಲಿ ಮತ್ತೆ ನೀರಿನ ಆಹಾಕಾರ..!

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಮತ್ತೆ ನೀರಿನ ಅಭಾವ ಉಂಟಾಗಿದೆ. ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನ ಸಂಭಂದಿಸಿದಂತೆ ಇಂದು (ಜೂನ್‌ ಗುರುವಾರ) ಮತ್ತು ನಾಳೆ (ಶುಕ್ರವಾರ ಜೂನ್‌ 07) ರಂದು ನೀರು ಬಿಡುವುದಿಲ್ಲ ವೆಂದು ಜಲ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಹೌದು ,ಬೆಂಗಳೂರಿನಲ್ಲಿ ಮತ್ತೆ ಶುರುವಾಯ್ತ ನೀರಿನ ಆಹಾಕಾರ.! ಸಿಲಿಕಾನ್ ಸಿಟಿಯಲ್ಲಿ ನೀರಿನ ಅಭಾವ ಉಂಟಾಯಿತೇ ಎಂದು ಜನ ಮತ್ತೆ ಕಂಗಾಲ್ ಆಗಿದ್ದಾರೆ. ಕಾವೇರಿ ನೀರಿಲ್ಲದೇ ಬೆಂಗಳೂರಿನಲ್ಲಿ ಕುಡಿಯಲು ನೀರಿಲ್ಲ, ಮೊದಲೇ ನೀರಿಲ್ಲದೆ ಜನರು ತತ್ತರಿಸಿ ಹೋಗಿದ್ದಾರೆ. ದಿನನಿತ್ಯದ ಜೀವನಕ್ಕೆ ಕಾವೇರಿ ನೀರಿಗೆ ಅವಲಂಬಿತವಾಗಿರುವ ಬೆಂಗಳೂರಿನ ಜನಕ್ಕೆ ಶಾಕಿಂಗ್ ಸುದ್ದಿ ಇದಾಗಿದೆ.

ಯೆಸ್… 2 ದಿನಗಳ ಕಾಲ ಕಾವೇರಿ ನೀರಿನಲ್ಲಿ ವ್ಯತಯವಾಗಲಿದೆ ಎಂದು ಜಲ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಕಾವೇರಿ 5 ನೇ ಹಂತ ಯೋಜನೆ ಅನುಷ್ಟಾನ ಸಂಬಂಧ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜೂನ್ 6 ಮತ್ತು 7 ರಂದು ನೀರು ಶೇಖರಿಸಿ ಇಟ್ಟುಕೋಳ್ಳುವಂತೆ ಬೆಂಗಳೂರಿನ ಜನಕ್ಕೆ ಜಲ ಮಂಡಳಿ ಮನವಿ ಮಾಡಿದೆ. ಇದನ್ನೂ ಓದಿ: ಕುಮಾರಣ್ಣನಿಗೆ ಯಾವ ಖಾತೆ ಮೇಲೆ ಕಣ್ಣು..?

ಗುರುವಾರ ಬೆಳಗ್ಗೆ 6 ಗಂಟೆಯಿಂದ ಶುಕ್ರವಾರದ ರವರೆಗೆ ನೀರು ಪೂರೈಕೆ ಸ್ಥಗಿತ ಎಂದು ಹೇಳಿದ್ದಾರೆ.

ಇನ್ನು 2 ದಿನ ನೀರಿ ಇಲ್ಲದೆ ಹೇಗಿರಬೇಕು ನಾವು, ಸರಿಯಾದ ಸಮಯದಲ್ಲಿ ಮೊದಲೇ ನೀರು ಬೀಡೊದಿಲ್ಲ ಎಂದು ಸಿಲಿಕಾನ್‌ ಸಿಟಿ ಮಂದಿ ಆಕ್ರೋಶ ಹೊರಹಾಕುತ್ತಿದ್ದಾರೆ.

Related