ಸಾರಿಗೆ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾದ ಸಚಿವರಿಗೆ ಸನ್ಮಾನ

ಸಾರಿಗೆ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾದ ಸಚಿವರಿಗೆ ಸನ್ಮಾನ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದಲ್ಲಿರುವ ಖಾಸಗಿ ಬಸ್ ಮಾಲಿಕರಿಗೂ ಮತ್ತು ಓಲಾ, ಉಬರ್ ಕಂಪನಿಗಳಿಗೆ ಬಹಳ ತೊಂದರೆ ಆಗಿದೆ ಎಂದು ಖಾಸಗಿ ವಾಹನ ಮಾಲೀಕರು ಹಲವಾರು ಬಾರಿ ಪ್ರತಿಭಟನೆಯನ್ನು ಕೈಗೊಂಡಿದ್ದರು.

ಇನ್ನು ಇದನ್ನರಿತ ರಾಜ್ಯ ಸರ್ಕಾರ ಖಾಸಗಿ ವಾಹನ ಮಾಲೀಕರಿಗೆ ಅವರದೇ ಆದ ವಿಶೇಷವಾದ ಕಾಳಜಿ ವಹಿಸಿ ಖಾಸಗಿ ವಾಹನ ಮಾಲೀಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ಇದರಿಂದ ಖಾಸಗಿ ವಾಹನ ಮಾಲೀಕರು ಸಚಿವ ರಾಮಲಿಂಗ ರೆಡ್ಡಿ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರು. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ; ಮತ್ತೊಂದು ಹಕ್ಕಿಗೆ ಬಲೆ ಬೀಸಿದ ಎಸ್ಐಟಿ

ಹೌದು, ಕರ್ನಾಟಕ ಟ್ಯಾಕ್ಸಿ ಚಾಲಕರು ಮಾಲೀಕರು ಮತ್ತು ಆಪರೇಟರ್ ಅಸೋಸಿಯೇಶನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾದ ಸಚಿವ ರಾಮಲಿಂಗವರೆಡ್ಡಿ ಅವರನ್ಬು ಅಭಿನಂಧಿಸಲಾಯಿತು. ಮಂಗಳವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, KSTDCಯ NON ACಯ ಹೊಸ ವಾಹನಗಳ ಸೇರ್ಪಡೆ ಸನ್ನಿವೇಶ ಗಮನಸೆಳೆಯಿತು.

ಸಾರಿಗೆ ಹಾಗೂ ಮುಜರಾಯಿ ಮಂತ್ರಿ ರಾಮಲಿಂಗ ರೆಡ್ಡಿ ಅವರು ಚಾಲಕರ ಬಗ್ಗೆ ಅತೀವ ಕಾಳಜಿ ಹೊಂದಿರುವ ಹಾಗೂ ನಿರಂತರ ಸಹಕಾರ ನೀಡಿ ಬೆನ್ನೆಲುಬಾಗಿದ್ದಾರೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಸೌಲಭ್ಯವನ್ನು ಮಾಡಿಕೊಟ್ಟಿರುವುದನ್ನು ಸ್ಮರಿಸಿ ಸಚಿವ ರಾಮಲಿಂಗರೆಡ್ಡಿ ಅವರನ್ನು ಅಭಿನಂದಿಸುವ ಸಲುವಾಗಿ ಹಾಗೂ KSTDCಯ NON AC ಹೊಸ ವಾಹನಗಳ ಸೇರ್ಪಡೆ ಪ್ರಕ್ರಿಯೆಯ ಅನಾವರಣ ಕಾರ್ಯಕ್ರಮ ಆಯೋಜಿತವಾಗಿತ್ತು.

ಈ ಕಾರ್ಯಕ್ರಮದಲ್ಲಿ KTODOನ ಅಧ್ಯಕ್ಷ ಹಮೀದ್ ಅಕ್ಬರ್ ಅಲಿ, ಕಾರ್ಯಾಧ್ಯಕ್ಷ ಚಂದ್ರಶೇಖರ್ ರವರು. ಕರ್ನಾಟಕ ಟ್ರಾವೆಲ್ ಆಪರೇಟರ್ ಸಂಘದ ಅಧ್ಯಕ್ಷರು ರಾಧಾಕೃಷ್ಣ ಹೊಳ್ಳರವರು,ಹಾಗೂ ಪೀಸ್ ಆಟೋದ ರಘುರವರು,ಕರ್ನಾಟಕ ಚಾಲಕರ ಒಕ್ಕೂಟದ ನಾರಾಯಣಸ್ವಾಮಿರವರು, ಭಾರತ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಜಯಣ್ಣ, ಜೈ ಭಾರತ್ ಸಂಘಟನೆಯ ಚಂದ್ರಕುಮಾರ್, ನೊಂದ ಚಾಲಕರ ವೇದಿಕೆಯ ರಾಜು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಸಂಸ್ಥೆಯ ಸಂಜಯ್ ಚಂದ್ರ, ವಿಶಾಲ್, ಕೆಎಸ್ಟಿಡಿಸಿಯ ಹರಿಣಿ, ಚಾಲಕರ ಟ್ರೇಡ್ ಯೂನಿಯನ್‌‌ನ ರವಿಕುಮಾರ್, KDSTC AC ಅಧ್ಯಕ್ಷರ ನೀಲಕಂಠಪ್ಪ, KSTDC NON ACಯ ಅಕ್ಮಲ್, ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related